alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ಚಾನೆಲ್ ಹೆಡ್ ಆಗಿ ಮದುವೆ ಮೋಸ ಮಾಡ್ತಿದ್ದ ವ್ಯಕ್ತಿ

ನೋಯ್ಡಾದ ಸೆಕ್ಟರ್ 24 ರ ಪೊಲೀಸರು ದೇಶದ ಅನೇಕ ನಗರಗಳ ಪೊಲೀಸರಿಗೆ ತಲೆನೋವಾಗಿದ್ದ ಯುವಕನನ್ನು ಬಂಧಿಸಿದ್ದಾರೆ. ಆತ ಹಾಗೂ ಆತನ ಸಹೋದರಿ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ. ಟಿವಿ ಚಾನೆಲ್ ನಿರ್ದೇಶಕ ಎಂದುಕೊಂಡು ಯುವಕ ಕೋಟ್ಯಾಂತ ರೂಪಾಯಿ ಮೋಸ ಮಾಡಿದ್ದಾನೆ.

ಮೆಟ್ರಿಮೋನಿಯಾದಲ್ಲಿ  ಫೋಟೋ ಹಾಕಿ ಮೋಸ ಮಾಡ್ತಿದ್ದರು. ಟಿವಿ ಚಾನೆಲ್ ನಿರ್ದೇಶಕ ಎಂದಿದ್ದ ಯುವಕ ತನಗೆ 20 ಲಕ್ಷ ತಿಂಗಳ ಸಂಬಳ ಬರುತ್ತದೆ ಎಂದಿದ್ದ. ಸಹೋದರಿ ಕ್ಯಾನ್ಸರ್ ರೋಗಿ ಎಂದು ಮೋಸ ಮಾಡ್ತಿದ್ದಳು. ಏಪ್ರಿಲ್ 2017 ರಲ್ಲಿ ನೋಯ್ಡಾದ ದಾದಿಯೊಬ್ಬಳಿಗೆ 40 ಲಕ್ಷ ರೂಪಾಯಿ ಮೋಸ ಮಾಡಿದ. ಮದುವೆಯಾಗಿ ದಾದಿಯನ್ನು ಕಾಶ್ಮೀರ ಸುತ್ತಿಸಿದ್ದ ಆರೋಪಿ ನಂತ್ರ 40 ಲಕ್ಷ ದೋಚಿ ಪರಾರಿಯಾಗಿದ್ದ.

ದಾದಿ ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆರೋಪಿ ಬಳಿ ಒಂದು ಐ 10 ಕಾರ್, ಎರಡು ಕಾರಿನ ನಂಬರ್ ಪ್ಲೇಟ್, ನಕಲಿ ಆರ್ಸಿ, 5 ಮೊಬೈಲ್, 5 ನಕಲಿ ಆಧಾರ್ ಕಾರ್ಡ್, 5 ವೋಟರ್ ಐಡಿ, 7 ಚೆಕ್ ಬುಕ್ ವಶಕ್ಕೆ ಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...