alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಹೆಸರಿನ ನಕಲಿ ಆಧಾರ್ ಬಳಸಿ ರೂಮ್ ಬುಕ್ಕಿಂಗ್

ಮುಂಬೈನ ಬಾಂದ್ರಾದಲ್ಲಿ ವ್ಯಕ್ತಿಯೊಬ್ಬ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹೆಸರಿನ ನಕಲಿ ಆಧಾರ್ ಕಾರ್ಡ್ ಬಳಸಿ ಹೋಟೆಲ್ ರೂಮ್ ಬುಕ್ ಮಾಡಿದ್ದಾನೆ. ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಂಗಳವಾರ ಯಾವುದೋ ಈವೆಂಟ್ ಗಾಗಿ ಊರ್ವಶಿ ಬಾಂದ್ರಾದ ಆ ಹೋಟೆಲ್ ಗೆ ಭೇಟಿ ನೀಡಿದ್ದರು. ಈಗಾಗ್ಲೇ ಅವರ ಹೆಸರಲ್ಲಿ ರೂಮ್ ಬುಕ್ ಆಗಿರೋದಾಗಿ ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ಆದ್ರೆ ನಟಿ ಊರ್ವಶಿ ಅಥವಾ ಆಕೆಯ ಸೆಕ್ರೆಟರಿ ಯಾವುದೇ ರೂಮ್ ಬುಕ್ಕಿಂಗ್ ಮಾಡಿರಲಿಲ್ಲ.

ಯಾರೋ ಊರ್ವಶಿ ರೌಟೇಲಾ ಹೆಸರು, ಫೋಟೋ ಬಳಸಿ ಹೋಟೆಲ್ ಬುಕ್ಕಿಂಗ್ ಮಾಡಿದ್ದರು. ಅಲ್ಲಿ ಕೊಟ್ಟಿದ್ದ ಆಧಾರ್ ಸಂಖ್ಯೆ ಸಹ ಊರ್ವಶಿಯದ್ದಾಗಿರಲಿಲ್ಲ. ಅಪರಿಚಿತ ವ್ಯಕ್ತಿ ವಿರುದ್ಧ ಕೇಸ್ ದಾಖಲಿಸಿರೋ ಪೊಲೀಸರು, ತನಿಖೆ ಮಾಡ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...