alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿ ಪೊಲೀಸರ ಬಲೆಗೆ ಬಿದ್ದ ಸ್ಯಾಂಡಲ್ವುಡ್ ನಿರ್ಮಾಪಕ

ಕೇಂದ್ರ ಗೃಹ ಇಲಾಖೆಯ ನಿರ್ದೇಶಕನೆಂದು ಹೇಳಿಕೊಂಡು ವಂಚಿಸುತ್ತಿದ್ದ ಸ್ಯಾಂಡಲ್ ವುಡ್ ನಿರ್ಮಾಪಕನನ್ನು ದೆಹಲಿ ಪೊಲೀಸರು ಕೆಲ ದಿನಗಳ ಹಿಂದೆ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರಿನ ಯಲಹಂಕ ನಿವಾಸಿ 42 ವರ್ಷದ ಕೆ. ಸೋಮಶೇಖರ್ ಬಂಧಿತ ಆರೋಪಿಯಾಗಿದ್ದು, ಈತ ತನ್ನ ಫಾರ್ಚೂನರ್ ಕಾರಿನ ಮೇಲೆ ನೀಲಿ ದೀಪ ಹಾಕಿಸಿಕೊಂಡಿದ್ದಲ್ಲದೇ ಕಾರಿನ ಮುಂಭಾಗದಲ್ಲಿ ಗೃಹ ಇಲಾಖೆಗೆ ಸಂಬಂಧಿಸಿದಂತೆ ಬೋರ್ಡ್ ಕೂಡಾ ಹಾಕಲಾಗಿತ್ತು. ಈ ಫೋಟೋ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದು, ಆರೋಪಿ ಬಂಧನಕ್ಕೆ ಇದು ನೆರವಾಗಿದೆ.

ಪ್ರಾಪರ್ಟಿ ಡೀಲರ್ ಆಗಿದ್ದ ಸೋಮಶೇಖರ್ ಅದರಲ್ಲಿ ನಷ್ಟ ಅನುಭವಿಸಿದ್ದು, ಬಳಿಕ ತನ್ನ ಜಮೀನನ್ನು ಮಾರಾಟ ಮಾಡಿ ಮೂರು ಚಿತ್ರ ನಿರ್ಮಿಸಿದ್ದಲ್ಲದೇ ಒಂದು ಚಿತ್ರದಲ್ಲಿ ಖಳನಾಯಕನ ಪಾತ್ರ ಕೂಡಾ ಮಾಡಿದ್ದನೆನ್ನಲಾಗಿದೆ. ಇದರಲ್ಲೂ ನಷ್ಟವುಂಟಾದ ಕಾರಣ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿದ್ದ ಸೋಮಶೇಖರ್ ಬಳಿಕ ಕೇಂದ್ರ ಗೃಹ ಇಲಾಖೆ ನಿರ್ದೇಶಕನೆಂಬ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಕಳಿಸುತ್ತಿದ್ದನೆನ್ನಲಾಗಿದೆ.

ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯಿಲ್ ಕಂಪನಿಗೆ ನೋಟೀಸ್ ನೀಡಿದ್ದ ಸೋಮಶೇಖರ್, ನಿಯಮಗಳ ಉಲ್ಲಂಘನೆ ಕಾರಣಕ್ಕೆ ಬಂದ್ ಮಾಡುವಂತೆ ಸೂಚಿಸಿದ್ದನೆನ್ನಲಾಗಿದೆ. ಅದರನುಸಾರ ಬಂದ್ ಮಾಡಿದ ಕಂಪನಿ, ಹೆಚ್ಚಿನ ಸ್ಪಷ್ಟನೆ ಕೋರಿ ಸಂಬಂಧಿಸಿದ ಇಲಾಖೆಗೆ ಪತ್ರ ಬರೆದ ವೇಳೆ ಅಸಲಿಯತ್ತು ಬಹಿರಂಗವಾಗಿದೆ.

ತಾವು ಯಾವುದೇ ನೋಟೀಸ್ ನೀಡಿಲ್ಲವೆಂದ ಇಲಾಖೆ, ನಕಲಿ ನೋಟೀಸ್ ಕುರಿತು ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಸೋಮಶೇಖರ್ ಗೆ ಸಹಾಯ ಮಾಡಿದ್ದ ವ್ಯಕ್ತಿಯ ಬಂಧನಕ್ಕೂ ಬಲೆ ಬೀಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...