alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಪ್ರೀತಿ ಮದುವೆ ಮಂಟಪಕ್ಕೆ ಬಂದ್ರೂ ಮದುವೆಯಾಗ್ಲಿಲ್ಲ…!

ಸಾಮಾಜಿಕ ಜಾಲತಾಣದ ಫೇಸ್ಬುಕ್ ಅನೇಕರನ್ನು ಒಂದು ಮಾಡ್ತಿದೆ. ಫೇಸ್ಬುಕ್ ಮೂಲಕ ಸ್ನೇಹ, ಪ್ರೀತಿ ಚಿಗುರಿ ನಂತ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನೇಕ ಜೋಡಿಗಳು ನಮ್ಮ ಕಣ್ಮುಂದಿದ್ದಾರೆ. ಕತಿಹಾರ್ ಯುವಕ ಹಾಗೂ ಜಾರ್ಖಂಡ್ ಯುವತಿಗೆ ಫೇಸ್ಬುಕ್ ನಲ್ಲಿ ಪ್ರೀತಿ ಚಿಗುರಿದೆ. ಪ್ರೀತಿ ಮದುವೆ ಮಂಟಪಕ್ಕೆ ಬಂದ್ರೂ ವರ ಬರಿಗೈನಲ್ಲಿ ಹೋಗುವಂತಾಗಿದೆ.

ಕತಿಹಾರ್ ಹುಡುಗ ಚಂದನ್ ಹಾಗೂ ಜಾರ್ಖಂಡದ ಹುಡುಗಿ ಫೇಸ್ಬುಕ್ ನಲ್ಲಿ ಸ್ನೇಹಿತರಾಗಿದ್ದರು. ಕೆಲವೇ ದಿನಗಳಲ್ಲಿ ಇಬ್ಬರ ಮಧ್ಯೆ ಪ್ರೀತಿ ಚಿಗುರಿದೆ. ಈ ವಿಷ್ಯವನ್ನು ಇಬ್ಬರೂ ಮನೆಯವರಿಗೆ ಹೇಳಿದ್ದಾರೆ. ಮನೆಯವರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಹುಡುಗನ ಮನೆಯವರು ಹುಡುಗಿಯನ್ನು  ಒಪ್ಪಿದ್ದರು.

ಕತಿಹಾರದಲ್ಲಿ ಮದುವೆಗೆ ತಯಾರಿ ನಡೆದಿತ್ತು. ಇನ್ನೇನು ವರಮಾಲೆ ಹಾಕಬೇಕು ಆಗ ಸತ್ಯವೊಂದು ಗೊತ್ತಾಗಿದೆ. ಹುಡುಗಿ ಅಪ್ರಾಪ್ತೆ ಎಂಬ ಸಂಗತಿ ಬಹಿರಂಗವಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮದುವೆ ನಿಲ್ಲಿಸಿದ್ದಾರೆ. ಹಾಗಾಗಿ ವರ, ವಧುವಿಲ್ಲದೆ ಮನೆಗೆ ತೆರಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...