alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ ಪ್ರೀತಿ ಮಾಡಿದ ಹುಡುಗಿ ಆಮೇಲೇನಾದ್ಲು ಗೊತ್ತಾ?

1

ಮತ್ತೊಂದು ಫೇಸ್ಬುಕ್ ಪ್ರೇಮ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪ್ರೀತಿ, ಮದುವೆ ಹೆಸರಲ್ಲಿ ಧರ್ಮ ಪರಿವರ್ತನೆ ಮಾಡಿ ತನಗೆ ಮೋಸ ಮಾಡಲಾಗಿದೆ ಎಂದು ಕೋಲ್ಕತ್ತಾದ ಹುಡುಗಿಯೊಬ್ಬಳು ಆರೋಪಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ನಿವಾಸಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದಿರುವುದು ಪಾಟ್ನಾದಲ್ಲಿ. ಲವ್ ಜಿಹಾದ್ ಹೆಸರಲ್ಲಿ ಪ್ರಕರಣ ದಾಖಲಾಗಿದೆ. ಕೋಲ್ಕತ್ತಾ ಹುಡುಗಿಗೆ ಪಾಟ್ನಾ ಹುಡುಗನ ಪರಿಚಯ ಫೇಸ್ಬುಕ್ ಮೂಲಕವಾಗಿದೆ. ಇಬ್ಬರೂ ಚಾಟ್ ಮಾಡ್ತಾ ಮಾಡ್ತಾ ಪ್ರೀತಿಗೆ ಬಿದ್ದಿದ್ದಾರೆ. ಹುಡುಗ ಮದುವೆಯಾಗ್ತೀಯಾ ಅಂತಾ ಕೇಳಿದ್ದಾನೆ. ಪ್ರೀತಿ ಗುಂಗಿನಲ್ಲಿದ್ದ ಹುಡುಗಿ ಕೋಲ್ಕತ್ತಾದಿಂದ ಪಾಟ್ನಾಕ್ಕೆ ಬಂದಿದ್ದಾಳೆ.

ಪಾಟ್ನಾದಲ್ಲಿ ಹುಡುಗಿಯ ಧರ್ಮ ಪರಿವರ್ತನೆ ಮಾಡಿದ ಹುಡುಗ, ಮದುವೆ ನಾಟಕವಾಡಿದ್ದಾನೆ. ನಂತ್ರ ಕಿರುಕುಳ ಶುರುಮಾಡಿದ್ದಾನೆ. ಇಷ್ಟೇ ಅಲ್ಲ, ಆಕೆಯ ಅಶ್ಲೀಲ ವಿಡಿಯೋ ತೆಗೆದು ನೆಟ್ ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಕಂಗಾಲಾದ ಹುಡುಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿ, ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...