alex Certify
ಕನ್ನಡ ದುನಿಯಾ       Mobile App
       

Kannada Duniya

ಕಳೆದು ಹೋದವನನ್ನು ಹುಡುಕಿಕೊಟ್ಟ ‘ಫೇಸ್ಬುಕ್’

ಏಳು ವರ್ಷದ ಹಿಂದೆ ಮನೆಯಿಂದ ತಪ್ಪಿಸಿಕೊಂಡ ಬಾಲಕನೊಬ್ಬನನ್ನು ಫೇಸ್ ಬುಕ್ ಸಹಾಯದಿಂದ ಪತ್ತೆಯಾಗಿ, ಪೋಷಕರೊಂದಿಗೆ ಸೇರಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

2011 ಜ.31 ರಂದು ಸುಜೀತ್ ಕುಮಾರ್ ಝಾ ಎನ್ನುವ 15 ವರ್ಷದ ಬಾಲಕ, ಹೈದರಾಬಾದ್‌ ನ ಅಕ್ಕನ ಮನೆಯಿಂದ ಯಾರಿಗೂ ಹೇಳದೆ ಕಣ್ಮರೆಯಾಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದರೂ ಬಾಲಕ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಮುಂಬಯಿನಲ್ಲಿ ನೆಲೆಸಿರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಪಡೆದ ಪೊಲೀಸರು, ಮುಂಬಯಿ ಪೊಲೀಸರ ಸಹಾಯದಿಂದ, 23 ವರ್ಷದ ಸುಜೀತ್ ನನ್ನು ವಾಪಾಸು ಕರೆತಂದಿದ್ದಾರೆ.

ಪತ್ತೆ ಆಗಿದ್ದು ಹೇಗೆ?
ಕೆಲ ದಿನಗಳ ಹಿಂದೆ ಸುಜೀತ್ ಫೇಸ್ ಬುಕ್ ಖಾತೆಯನ್ನು ಆತನ ಭಾವ ಪತ್ತೆ ಹಚ್ಚಿದ್ದು, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ಆದರೆ ಸುಜೀತ್ ಫ್ರೆಂಡ್ ರಿಕ್ವೆಸ್ಟ್, ಅಕ್ಸೆಪ್ಟ್ ಮಾಡದೇ, ಖಾತೆಯ ಹೆಸರು ಹಾಗೂ ಪ್ರೊಫೈಲ್ ಪಿಕ್ಚರ್ ಬದಲಿಸಿಕೊಂಡಿದ್ದಾನೆ.

ಈ ಬಗ್ಗೆ ಹೈದರಾಬಾದ್ ಪೊಲೀಸರಿಗೆ ಮಾಹಿತಿ ನೀಡಿದಾಗ, ಸೈಬರ್ ಪೊಲೀಸರ ಸಹಾಯದಿಂದ ಸುಜೀತ್ ಇರುವ ಸ್ಥಳವನ್ನು ಟ್ರಾಕ್ ಮಾಡಿದ್ದಾರೆ. ಆಗ ಮುಂಬಯಿನಲ್ಲಿ ಕ್ಯಾಟರಿಂಗ್ ಒಂದರಲ್ಲಿ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಮುಂಬಯಿ ಪೊಲೀಸರ ನೆರವಿನೊಂದಿಗೆ ಸುಜೀತ್ ನನ್ನು ತನ್ನ ಕುಟುಂಬದೊಂದಿಗೆ ಒಂದುಗೂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...