alex Certify
ಕನ್ನಡ ದುನಿಯಾ       Mobile App
       

Kannada Duniya

ಕಳೆದು ಹೋದ ಮಗ 13 ವರ್ಷಗಳ ನಂತರ ಸಿಕ್ಕಿದ್ದು ಹೇಗೆ ಗೊತ್ತಾ?

ಸಾಮಾಜಿಕ ಜಾಲತಾಣದ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಸಾಮಾಜಿಕ ಜಾಲತಾಣವನ್ನು ಜನರು ಹೊಸ ಹೊಸ ರೀತಿಯಲ್ಲಿ ಬಳಸುತ್ತಿದ್ದಾರೆ. ಕೆಲವರು ಇದ್ರಲ್ಲಿ ವ್ಯವಹಾರ ಶುರು ಮಾಡಿದ್ರೆ ಮತ್ತೆ ಕೆಲವರು ಮೋಜಿಗಾಗಿ ಬಳಸ್ತಾರೆ. ಸಾಮಾಜಿಕ ಜಾಲತಾಣ ಕೆಲವರು ಮೋಸ ಹೋಗಲು ಕಾರಣವಾದ್ರೆ ಮತ್ತೆ ಕೆಲವರು ಒಂದಾಗುವ ಕೆಲಸ ಮಾಡ್ತಿದೆ.

ರಾಜಸ್ತಾನದ ಸಿಕರ್ ನಲ್ಲಿ ಆಶ್ಚರ್ಯಕರ ಘಟನೆ ಫೇಸ್ಬುಕ್ ಮೂಲಕ ನಡೆದಿದೆ. ಲಕ್ಷ್ಮಣಗರ್ ಪಟ್ಟಣದಲ್ಲಿ 13 ವರ್ಷಗಳ ನಂತ್ರ ಮಗನೊಬ್ಬ ಮನೆಗೆ ಬಂದಿದ್ದಾನೆ. ಇಷ್ಟು ವರ್ಷದ ನಂತ್ರ ಕಳೆದು ಹೋದ ಮಗ ಕಣ್ಮುಂದೆ ಬಂದಿರುವುದು ತಾಯಿಗೆ ಮರು ಜೀವ ಬಂದಂತಾಗಿದೆ. ಫೇಸ್ಬುಕ್ ಕಳೆದು ಹೋದ ಕುಟುಂಬವನ್ನು ಒಂದು ಮಾಡುವ ಕೆಲಸ ಮಾಡಿ ಭೇಷ್ ಎನ್ನಿಸಿಕೊಂಡಿದೆ.

ಮಾಯಾ ದೇವಿಯ 10 ವರ್ಷದ ಮಗ ಫೆಬ್ರವರಿ 20, 2005 ರಲ್ಲಿ ಕಾಣೆಯಾಗಿದ್ದ. ಮನೆಯ ಮುಂದೆ ಆಡ್ತಿದ್ದ ಬಂಟಿಯನ್ನು ಸಾಧು ಒಬ್ಬ ಕರೆದೊಯ್ದಿದ್ದನಂತೆ. ಸುಮಾರು 2 ವರ್ಷಗಳ ಕಾಲ ಕಾಡಿನಲ್ಲಿ ಸಾಧು ಬಂಟಿಯಿಂದ ಕೆಲಸ ಮಾಡಿಸಿಕೊಂಡಿದ್ದನಂತೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಬಂಟಿ ಅಲ್ಲಿ, ಇಲ್ಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದನಂತೆ. 2018 ರಲ್ಲಿ ಬಂಟಿ ತನ್ನ ಸಹೋದರನನ್ನು ಫೇಸ್ಬುಕ್ ಮೂಲಕ ಸಂಪರ್ಕಿಸಿದ್ದಾನೆ. ಆರಂಭದಲ್ಲಿ ಸಹೋದರನಿಗೆ ಬಂಟಿ ಬಗ್ಗೆ ತಿಳಿಯಲಿಲ್ಲ. ಆದ್ರೆ ಬಂಟಿ ಎಲ್ಲ ಸಂಗತಿ ಹೇಳಿದ್ದಾನೆ. ಮನೆಯವರ ಭಯಕ್ಕೆ ವಾಪಸ್ ಬರ್ತಿಲ್ಲ ಎಂದಿದ್ದಾನೆ. ಆತನ ಮನವೊಲಿಸಿ ಸಹೋದರ ಕೊನೆಗೂ ತಮ್ಮನನ್ನು ಮನೆಗೆ ಕರೆ ತಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...