alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮುರಿಯಲು ಕಾರಣವಾಯ್ತು ವಧುವಿನ ಇಂಥ ಫೋಟೋ…!

ಉತ್ತರ ಪ್ರದೇಶದ ಸೋನಭದ್ರದಲ್ಲಿ ಮದುವೆ ತಯಾರಿ ನಡೆದಿತ್ತು. ಆದ್ರೆ ಹುಡುಗಿಯ ಒಂದು ಫೋಟೋ ಇಡೀ ಸಂಭ್ರಮಕ್ಕೆ ಬ್ರೇಕ್ ನೀಡಿದ್ದಲ್ಲದೆ ಮದುವೆ ಮುರಿದು ಬೀಳಲು ಕಾರಣವಾಯ್ತು.

ಹುಡುಗಿ ಪ್ರಕಾರ, ಅದೇ ಗ್ರಾಮದ ಹುಡುಗನೊಬ್ಬ ಫೇಸ್ಬುಕ್ ನಲ್ಲಿದ್ದ ಹುಡುಗಿ ಫೋಟೋವನ್ನು ಎಡಿಟ್ ಮಾಡಿ ಹುಡುಗನ ಕಡೆಯವರಿಗೆ ಕಳುಹಿಸಿದ್ದಾನೆ. ಆ ಫೋಟೋ ನೋಡಿ ದಂಗಾದ ವರನ ಕಡೆಯವರು ಮದುವೆ ನಿಲ್ಲಿಸಿದ್ದಾರೆ. ಆರೋಪಿ ಯುವಕ ಎಸ್ಪಿಯ ಮಾಜಿ ಶಾಸಕರ ಮಗ ಎನ್ನಲಾಗಿದೆ.

ಆರೋಪಿ, ಪೀಡಿತ ವಧುವನ್ನು ಪದುವೆಯಾಗುವಂತೆ ಸದಾ ಪೀಡಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಹುಡುಗಿ ಒಪ್ಪಿರಲಿಲ್ಲ. ಸೇಡು ತೀರಿಸಿಕೊಳ್ಳಲು ಮುಂದಾದ ಶಾಸಕರ ಮಗ ಫೇಸ್ಬುಕ್ ನಲ್ಲಿರುವ ಹುಡುಗಿ ಫೋಟೋ ಡೌನ್ಲೋಡ್ ಮಾಡಿ, ಅದ್ರ ಜೊತೆ ತನ್ನ ಫೋಟೋ ಸೇರಿಸಿ, ಅಶ್ಲೀಲ ಫೋಟೋವನ್ನು ವರನ ಕಡೆಯವರಿಗೆ ಕಳುಹಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...