alex Certify
ಕನ್ನಡ ದುನಿಯಾ       Mobile App
       

Kannada Duniya

10ನೇ ತರಗತಿ ವಿದ್ಯಾರ್ಥಿನಿ ಈ ಸ್ಥಿತಿಗೆ ಕಾರಣಾವಾಯ್ತು ಫೇಸ್ಬುಕ್ ಸ್ನೇಹ

ದೆಹಲಿ ಕಲ್ಯಾಣಪುರಿ ವಿದ್ಯಾರ್ಥಿನಿಯೊಬ್ಬಳಿಗೆ ಫೇಸ್ಬುಕ್ ಸ್ನೇಹ ದುಬಾರಿಯಾಗಿ ಪರಿಣಮಿಸಿದೆ. 10ನೇ ತರಗತಿ ಪಾಸ್ ಮಾಡಲು ಸುಲಭ ಉಪಾಯ ಹೇಳ್ತೇನೆಂದು ಹೊಟೇಲ್ ಗೆ ವಿದ್ಯಾರ್ಥಿನಿಯನ್ನು ಕರೆದ ಆರೋಪಿ ನಶೆ ಪದಾರ್ಥ ನೀಡಿ ಅತ್ಯಾಚಾರವೆಸಗಿದ್ದಾನೆ.

ಭಾನುವಾರ ವಿದ್ಯಾರ್ಥಿನಿ ಗರ್ಭಿಣಿ ಎಂಬ ಸಂಗತಿ ತಿಳಿಸಿದೆ. ನಂತ್ರ ಪೊಲೀಸ್ ಠಾಣೆಗೆ ಹೋಗಿ ವಿದ್ಯಾರ್ಥಿನಿಯೇ ದೂರು ನೀಡಿದ್ದಾಳೆ. 32 ವರ್ಷದ ವಿವಾಹಿತ ಅಭಯ್ ಎಂಬಾತ 2016ರಲ್ಲಿಯೇ ವಿದ್ಯಾರ್ಥಿನಿಗೆ ಫೇಸ್ಬುಕ್ ನಲ್ಲಿ ಸ್ನೇಹ ಬೆಳೆಸಲು ಯತ್ನಿಸಿದ್ದ. 2017ರಲ್ಲಿ ವಿದ್ಯಾರ್ಥಿನಿ ಒಪ್ಪಿಗೆ ನೀಡಿದ್ದಳು. ನಂತ್ರ ಇಬ್ಬರು ಹತ್ತಿರವಾಗತೊಡಗಿದ್ದರು.

ಸಿಬಿಎಸ್ಸಿ ಅಧಿಕಾರಿಗಳು ನನಗೆ ಆಪ್ತರು. ಅವ್ರ ಸಹಾಯದಿಂದ ಪರೀಕ್ಷೆ ಪಾಸ್ ಮಾಡಿಸುತ್ತೇನೆಂದು ಆಸೆ ತೋರಿಸಿದ ಆರೋಪಿ ಆಗಾಗ ಹೊಟೇಲ್ ಗೆ ಕರೆದೊಯ್ದು ಅತ್ಯಾಚಾರವೆಸಗುತ್ತಿದ್ದ. ಆಗಾಗ ವೈದ್ಯಕೀಯ ತಪಾಸಣೆ ಕೂಡ ನಡೆಸ್ತಿದ್ದ. ಆದ್ರೆ ಏಪ್ರಿಲ್ ನಲ್ಲಿ ಮತ್ತೆ ಅತ್ಯಾಚಾರವೆಸಗಿದ್ದ ಆರೋಪಿ. ಆತನ ಜೊತೆ ಹೋದಾಗ್ಲೇ ತಾನು ಗರ್ಭಿಣಿ ಎಂಬುದು ವಿದ್ಯಾರ್ಥಿನಿಗೆ ತಿಳಿದಿದೆ. ಭಯಗೊಂಡ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...