alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಪುತ್ರನ ಮದುವೆಗೆ ಬಂದ ಅಮೆರಿಕ ಅಮ್ಮ

face book amma

ಬಾಂಧವ್ಯಕ್ಕೆ ಬೇಲಿ ಇಲ್ಲ. ತಾಯಿ- ಮಗನ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಆಗಲ್ಲ ಎಂದು ಹೇಳುತ್ತಾರೆ. ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಕೂಡ ಸಂಬಂಧ ಬೆಸೆಯುವ ಸೇತುವೆಗಳಾಗಿವೆ. ಇದರಿಂದಾಗಿ ಬಹಳ ವರ್ಷಗಳ ಬಳಿಕ ಸ್ನೇಹಿತರು ಸಿಕ್ಕರೆ, ಗೊತ್ತೇ ಇಲ್ಲದವರೂ ಆತ್ಮೀಯರಾಗುತ್ತಾರೆ.

ಹೀಗೆ ಉತ್ತರ ಪ್ರದೇಶದ ಯುವಕನೊಬ್ಬನಿಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಅಮೆರಿಕದ ಮಹಿಳೆಯೊಬ್ಬರು ಆತನನ್ನೇ ಮಗನೆಂದು ಭಾವಿಸಿದ್ದಾರೆ. ಮಾತ್ರವಲ್ಲ, ಮಗನ ಮದುವೆಗೂ ಬಂದು ಬರೋಬ್ಬರಿ 25 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಉತ್ತರ ಪ್ರದೇಶದ ಗೋರಖ್ ಪುರದ 28 ವರ್ಷದ ಕೃಷ್ಣ ಮೋಹನ್ ತ್ರಿಪಾಠಿ ಅವರು ತಾಯಿಯನ್ನು ಕಳೆದುಕೊಂಡಿದ್ದರಿಂದ ಫೇಸ್ ಬುಕ್ ನಲ್ಲಿ ಪರಿಚಯವಾದ ಕ್ಯಾಲಿಫೋರ್ನಿಯಾದ 60 ವರ್ಷದ ಮಹಿಳೆ ಡೆಬ್ ಮಿಲ್ಲರ್ ಅವರನ್ನು ತಾಯಿ ಎಂದು ಭಾವಿಸಿದ್ದರು.

ಡೆಬ್ ಮಿಲ್ಲರ್ ಅವರಿಗೆ ಮಕ್ಕಳಿಲ್ಲದ ಕಾರಣ ಇಬ್ಬರೂ ಫೇಸ್ ಬುಕ್ ನಲ್ಲಿಯೇ ತಾಯಿ, ಮಗನ ಬಾಂಧವ್ಯ ಹಂಚಿಕೊಂಡಿದ್ದರು. ಫೇಸ್ ಬುಕ್ ಮಗನ ಮದುವೆಗಾಗಿ ದೂರದ ಕ್ಯಾಲಿಫೋರ್ನಿಯಾದಿಂದ ಬಂದ ಮಿಲ್ಲರ್ ಮಗನಿಗೆ ಭರ್ಜರಿ ಉಡುಗೊರೆಯನ್ನು ಕೊಟ್ಟು ಅಮೆರಿಕಕ್ಕೆ ಬಂದು ಹೋಗುವಂತೆ ಆಹ್ವಾನ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...