alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ನಡೆದಿದೆ ಅನ್ವೇಷಣೆ

ಖ್ಯಾತ ಮೆಸೇಜಿಂಗ್ ಆಪ್ ಆಗಿರುವ ವಾಟ್ಸಾಪ್ ನಲ್ಲಿ ಸುಳ್ಳು ಸುದ್ದಿಗಳಿಗೇನು ಬರವಿಲ್ಲ. ಅನೇಕ ಬಾರಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುವ ಫೇಕ್ ಮೆಸೇಜ್ ಸಮಾಜದ ಶಾಂತಿ ಹದಗೆಡೋದಕ್ಕೂ ಕಾರಣವಾಗಲಿದೆ. ಈಗ ಇಂತಾ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕೋದಕ್ಕೆ ತಜ್ಞರು ನಿರ್ಧರಿಸಿದ್ದಾರೆ. ವಾಟ್ಸಾಪ್ ನಲ್ಲಿ ಬರುವಂತಾ ಸುದ್ದಿಗಳಲ್ಲಿ ನಿಜ ಯಾವುದು ಮತ್ತು ಸುಳ್ಳು ಯಾವುದು ಅನ್ನೋದನ್ನ ಗುರುತಿಸುವಂತಾ ವ್ಯವಸ್ಥೆ ಜಾರಿಗೆ ತರೋದಕ್ಕೆ ಪ್ರಯತ್ನಗಳು ನಡೆದಿವೆ.

ದೆಹಲಿಯ ಪುನ್ನುರುಗಮ್ ಕುಮಾರಗಾರು ಎಂಬ ಪ್ರೊಫೆಸರ್ ನೇತೃತ್ವದ ಸಂಶೋಧನಾ ತಂಡ ವಾಟ್ಸಾಪ್ ಅಪ್ಲಿಕೇಶನ್ ಗೆ ಸುಳ್ಳು ಸುದ್ದಿಗಳನ್ನು ಇಂಡಿಕೇಟ್ ಮಾಡುವಂತಾ ಸಪೋರ್ಟಿಂಗ್ ಸಿಸ್ಟಮ್ ಒಂದನ್ನ ಆಡ್ ಮಾಡೋಕೆ ಪ್ರಯತ್ನ ನಡೆಸಿದೆ. ಪ್ರಸ್ತುತ ಸಂದರ್ಭದಲ್ಲಿ ಇಂತಾ ಸಾಧನದಿಂದ ವಾಟ್ಸಾಪ್ ನ ಕ್ರಿಯಾಶೀಲ ಮಟ್ಟವೂ ಹೆಚ್ಚಾಗಲಿದೆ. ಅಲ್ಲದೇ ಜನರಿಗೆ ಅಸಲಿ ಸುದ್ದಿ ಯಾವುದು ಅನ್ನೋದ್ರ ಬಗ್ಗೆ ಅರಿವು ಮೂಡಿಸೋದಕ್ಕೂ ಸಹಕಾರಿಯಾಗಲಿದೆಯಂತೆ.

ಪ್ರಯೋಗದ ನಿಟ್ಟಿನಲ್ಲಿ ಹಲವು ದತ್ತಾಂಶಗಳ ಸಂಗ್ರಹಣೆಗಿಳಿದಿದೆ ಪರಿಶೋಧನಾ ತಂಡ. ಮೊಬೈಲ್ ನಂಬರ್ ಒಂದಕ್ಕೆ ಹಲವು ಸುದ್ದಿಗಳನ್ನು ವಾಟ್ಸಾಪ್ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಅದರಲ್ಲಿ ನಿಖರ ಸುದ್ದಿಗಳಿಗೆ ಹಸಿರು ಬಣ್ಣದ ಇಂಡಿಕೇಷನ್ ಆದ್ರೆ ಹಳದಿ ಬಣ್ಣದ ಮೆಸೇಜ್ಗಳನ್ನ ವಾಟ್ಸಾಪ್ ಆ ಸಂದೇಶವನ್ನ ಡೀಕೋಡ್ ಮಾಡಲಾಗಿಲ್ಲ ಎಂದು ಅರ್ಥ. ಕೆಂಪು ಬಣ್ಣದ ಸಂದೇಶಗಳು ಇದು ಸುಳ್ಳು ಸುದ್ದಿ ಅನ್ನೋದನ್ನ ಖಚಿತಪಡಿಸಲಿವೆಯಂತೆ. ಚಿತ್ರಗಳು, ಲಿಂಕ್ಗಳನ್ನು ಕೂಡ ಇದೇ ಮಾದರಿಯಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...