alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್-ಬಿಜೆಪಿಗೆ ಶಾಕ್ ಕೊಟ್ಟ ರಾಜಕೀಯ ಚಾಣಕ್ಯ

ರಾಜಕೀಯ ಯೋಜನಾಕಾರನಾಗಿ ವಿವಿಧ ರಾಜಕೀಯ ಪಕ್ಷಗಳ ಒಳಹೊಕ್ಕು ಬಂದಿರುವ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಇದೀಗ ಜೆಡಿಯು ಮೂಲಕ ರಾಜಕೀಯ ಪ್ರವೇಶಕ್ಕೆ ತಯಾರಿ ನಡೆಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ತಮ್ಮ ಪರ ಕಾರ್ಯ ನಿರ್ವಹಿಸಲು ಪ್ರಶಾಂತ್ ಕಿಶೋರ್ ರನ್ನು ಸೆಳೆಯಲು ಕಾಂಗ್ರೆಸ್-ಬಿಜೆಪಿ ಯತ್ನ ನಡೆಸಿರುವಾಗಲೇ ಅವರು ಈ ತೀರ್ಮಾನ ಕೈಗೊಂಡಿದ್ದಾರೆ.

ನರೇಂದ್ರ ಮೋದಿ, ಬಿಹಾರದ ನಿತೀಶ್ ಕುಮಾರ್, ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರ ಚುನಾವಣಾ ಅಭಿಯಾನದ ಯೋಜನಾಕಾರರಾಗಿ ಕಾರ್ಯನಿರ್ವಹಿಸಿದ್ದ ಪ್ರಶಾಂತ್ ಕಿಶೋರ್ ತಮ್ಮ ಚೊಚ್ಚಲ ರಾಜಕೀಯ ಪ್ರವೇಶಕ್ಕೆ ಜೆಡಿಯು ಪಕ್ಷವನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ಭಾನುವಾರ ಪಾಟ್ನಾದಲ್ಲಿ ಅವರು ಬಿಹಾರ ಸಿಎಂ ನಿತೀಶ್ ಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರಲಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಹೊಸ ಪ್ರಯಾಣವನ್ನು ಬಿಹಾರದಿಂದ ಆರಂಭಿಸಲು ಸಾಕಷ್ಟು ಉತ್ಸಾಹಭರಿತನಾಗಿದ್ದೇನೆಂದು ಹೇಳಿಕೊಂಡಿದ್ದಾರೆ.

2015 ಬಿಹಾರ ವಿಧಾನಸಭೆ ಚುನಾವಣೆ ಬಳಿಕ ಕಿಶೋರ್ ಅವರು ನಿತೀಶ್ ಜತೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿದ್ದರು. ಫಲಿತಾಂಶ ಪ್ರಕಟವಾದ ಬಳಿಕ ಸರಕಾರಕ್ಕೆ ನೀತಿ ಮತ್ತು ಯೋಜನೆಗಳ ಸಲಹೆಗಾರರಾಗಿ ನೇಮಕಗೊಂಡಿದ್ದರು. ಈ ನೇಮಕದ ಬಗ್ಗೆ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಕೆಯಾಗಿತ್ತು. ಆದರೆ, ನ್ಯಾಯಾಲಯ ಸಿಎಂ ತೀರ್ಮಾನ ಸರಿ ಇದೆ ಎಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...