alex Certify
ಕನ್ನಡ ದುನಿಯಾ       Mobile App
       

Kannada Duniya

ಏರಿಕೆಯಾಯ್ತು ಹಣ ಪಡೆಯುವ ಪ್ರಮಾಣ

arun-jaitleyಕಪ್ಪು ಹಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ನವೆಂಬರ್ 8 ರ ಮಧ್ಯ ರಾತ್ರಿಯಿಂದ 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯಗೊಳಿಸಲಾಗಿದ್ದು, ತಮ್ಮಲ್ಲಿರುವ ಹಣವನ್ನು ಬದಲಾವಣೆ ಮಾಡಿಕೊಳ್ಳಲು ಸಾರ್ವಜನಿಕರಿಗೆ ಡಿಸೆಂಬರ್ 31 ರವರೆಗೆ ಅವಕಾಶ ನೀಡಲಾಗಿತ್ತಾದರೂ ಬದಲಾವಣೆಗೆ ನಿಗದಿಪಡಿಸಲಾಗಿದ್ದ ಹಣದ ಪ್ರಮಾಣ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ದಿನವೊಂದಕ್ಕೆ 4 ಸಾವಿರ ರೂ. ಗಳ ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದ್ದು, ಎರಡು ಸಾವಿರ ರೂ. ಮುಖ ಬೆಲೆಯ ನೋಟುಗಳು ಮಾತ್ರ ಲಭ್ಯವಾಗುತ್ತಿದ್ದರಿಂದ ಚಿಲ್ಲರೆ ಕುರಿತು ಮತ್ತಷ್ಟು ಸಮಸ್ಯೆ ಎದುರಾಗಿತ್ತು. ಅಲ್ಲದೇ ಹಲವು ಬ್ಯಾಂಕ್ ಗಳಲ್ಲಿ ಸದ್ಯಕ್ಕೆ ಒಬ್ಬರು ತಮ್ಮ ದಾಖಲೆ ನೀಡಿ ಒಮ್ಮೆ ಮಾತ್ರ 4 ಸಾವಿರ ರೂ. ಮಾತ್ರ ಪಡೆಯಲು ಸಾಧ್ಯವೆಂದು ಹೇಳಿದ್ದ ಕಾರಣ ತಮ್ಮ ದಿನನಿತ್ಯದ ವಹಿವಾಟಿಗೆ ಹಣ ದೊರೆಯದೆ ಬಹಳಷ್ಟು ಮಂದಿ ಕಂಗಾಲಾಗಿದ್ದರು.

ಇದನ್ನೆಲ್ಲ ಮನಗಂಡ ಸರ್ಕಾರ, ಈಗ ಕೊಂಚ ರಿಲೀಫ್ ನೀಡಿದ್ದು, 4000 ರೂ. ಬದಲಾಗಿ 4,500 ರೂ. ಪಡೆಯುವ ಅವಕಾಶ ನೀಡಿದೆ. ಅಲ್ಲದೇ ಬ್ಯಾಂಕ್ ಖಾತೆಯಿಂದ ವಾರಕ್ಕೆ ಕೇವಲ 20 ಸಾವಿರ ರೂ. ಮಾತ್ರ ಪಡೆಯಬಹುದೆಂದು ವಿಧಿಸಲಾಗಿದ್ದ ನಿಯಮವನ್ನು ಈಗ 24 ಸಾವಿರ ರೂ. ಗಳಿಗೆ ಏರಿಕೆ ಮಾಡಿದೆ. ಜೊತೆಗೆ ಎಟಿಎಂ ಗಳಲ್ಲಿ ಹಣ ಪಡೆಯಲು ನಿಗದಿಪಡಿಸಿದ್ದ ಹಣದ ಪ್ರಮಾಣವನ್ನು 2 ಸಾವಿರದಿಂದ 2,500 ರೂ. ಗಳಿಗೆ ಏರಿಕೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...