alex Certify
ಕನ್ನಡ ದುನಿಯಾ       Mobile App
       

Kannada Duniya

ಹತ್ತನೇ ತರಗತಿಯಲ್ಲಿ 47 ನೇ ಬಾರಿ ಫೇಲ್ ಆದ 82 ರ ಅಜ್ಜ

shivcharan

ವಿದ್ಯೆ ಕಲಿಯಲು ವಯಸ್ಸಿನ ಮಿತಿ ಇಲ್ಲ. ಓದುವ ಆಸಕ್ತಿ ಇದ್ದರೆ ಇಳಿ ವಯಸ್ಸಿನಲ್ಲಿಯೂ ಪರೀಕ್ಷೆ ಬರೆಯಬಹುದು. ಹಾಗೆ ಒಮ್ಮೆ ಫೇಲ್ ಆದ ಮಕ್ಕಳು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಧೈರ್ಯ ಕಳೆದುಕೊಂಡು ಎಲ್ಲವೂ ಮುಗಿಯಿತು ಎಂಬ ನಿರಾಸೆಗೊಳಗಾಗ್ತಾರೆ. ಇವರಿಗೆ ಶಿವಚರಣ್ ಉತ್ತಮ ಉದಾಹರಣೆ. ರಾಜಸ್ಥಾನದ ಅಲ್ವಾರ್ ನ ಶಿವಚರಣ್  82 ವರ್ಷದಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದು ಫೇಲ್ ಆಗಿದ್ದಾರೆ.

ಶಿವಚರಣ್ ಸತತ 47ನೇ ಬಾರಿ 10ನೇ ತರಗತಿ ಪರೀಕ್ಷೆ ಬರೆದಿದ್ದರು. ಕಳೆದ ಬಾರಿ ಸಮಾಜ ವಿಜ್ಞಾನದಲ್ಲಿ ಶಿವಚರಣ್ ಪಾಸ್ ಆಗಿದ್ದರು. ನಿಧಾನ ಕೈಬರಹದಿಂದಾಗಿ ಈ ಬಾರಿ ಪರೀಕ್ಷೆಯನ್ನು ಸರಿಯಾಗಿ ಬರೆಯಲು ಸಾಧ್ಯವಾಗಲಿಲ್ಲ. ಭಾನುವಾರ ಫಲಿತಾಂಶ ಬಂದಿದ್ದು, ಹಿಂದಿಗೆ 7, ಗಣಿತ ಹಾಗೂ ಇಂಗ್ಲೀಷ್ ಗೆ ಶೂನ್ಯ, ವಿಜ್ಞಾನ 5, ಸಾಮಾಜಿಕ ವಿಜ್ಞಾನ 17 ಹಾಗೂ ಸಂಸ್ಕೃತ 7 ಅಂಕ ಪಡೆದಿದ್ದಾರೆ. ಒಟ್ಟಾರೆ ಶಿವಚರಣ್ 36 ಅಂಕ ಪಡೆಯಲು ಯಶಸ್ವಿಯಾಗಿದ್ದಾರೆ.

47 ನೇ ಬಾರಿ ಫೇಲ್ ಆದ್ರೂ ಶಿವಚರಣ್ ಮಾತ್ರ ಸೋಲನ್ನು ಸ್ವೀಕರಿಸಿಲ್ಲ. ಮತ್ತೆ ಹತ್ತನೇ ತರಗತಿ ಪರೀಕ್ಷೆ ಬರೆದು ಪಾಸ್ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...