alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ನೇಮಕಾತಿಗೆ ಪರೀಕ್ಷೆಯಲ್ಲಿ ಪಾಲ್ಗೊಂಡ ಖೈದಿ

police

ಮೂವರು ಪೊಲೀಸರು ವಿಚಾರಣಾಧೀನ ಖೈದಿಯೊಬ್ಬನ ಕೈಗೆ ಕೋಳ ತೊಡಿಸಿಕೊಂಡು ರಸ್ತೆಗೆ ಬಂದ್ರು. ಅಲ್ಲಿ ಪೊಲೀಸರು ಆತನ ಕೈ ಕೋಳ ಬಿಚ್ಚುತ್ತಿದ್ದಂತೆ ಆತ ಓಡಲು ಶುರುಮಾಡಿದ. ಆದ್ರೆ ಆತ ತಪ್ಪಿಸಿಕೊಂಡು ಹೋಗಲಿಲ್ಲ. ಬದಲಾಗಿ ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ.

ಹರಿಯಾಣ ದನಾನ್ ಗ್ರಾಮದ 23 ವರ್ಷದ ಜಿತೇಂದ್ರ ಸುಮಾರು 14 ತಿಂಗಳಿಂದ ಸೋನೆಪತ್ ಜೈಲಿನಲ್ಲಿದ್ದಾನೆ. ಕೊಲೆ ಯತ್ನ ಆರೋಪದಡಿಯಲ್ಲಿ ಕಂಬಿ ಎಣಿಸುತ್ತಿದ್ದಾನೆ. ಆತನ ಪ್ರಕರಣ ಕೋರ್ಟ್ ನಲ್ಲಿದ್ದು, ಇನ್ನೂ ಆತ ಅಪರಾಧಿ ಎಂಬುದು ಸಾಬೀತಾಗಿಲ್ಲ. ಹಾಗಾಗಿ ಆತನಿಗೆ ಪೊಲೀಸ್ ನೇಮಕಾತಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ. 23 ನಿಮಿಷದಲ್ಲಿ ಜಿತೇಂದ್ರ 5 ಕಿಲೋಮೀಟರ್ ಓಡಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾನೆ.

ಜಿತೇಂದ್ರ ತಂದೆ ಸುರೇಂದ್ರ ಹರ್ಯಾಣಾದಲ್ಲಿ ಪೊಲೀಸರಾಗಿದ್ದರು. ಜಿತೇಂದ್ರ ದೈಹಿಕ ಪರೀಕ್ಷೆಗೆ ಸಾಕಷ್ಟು ಭದ್ರತೆ ಮಾಡಲಾಗಿತ್ತು. ಹಿಂದೆ ಮುಂದೆ ಪೊಲೀಸರಿದ್ದರು. ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ರೆ ಗುಂಡು ಹಾರಿಸುವ ಅಧಿಕಾರ ಪೊಲೀಸರಿಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...