alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷಾ ಅಕ್ರಮ ತಪ್ಪಿಸೋಕೆ ಮಾಡಿದ್ದೇನು ಗೊತ್ತಾ…?

ರಾಜಸ್ಥಾನದಲ್ಲಿ ಎರಡು ದಿನಗಳ ಕಾಲ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆ ಸುಸೂತ್ರವಾಗಿ ಮುಗಿದಿದೆ. ಕೆಲವು ಕಡೆ ಕಾಪಿ ಹೊಡೆದ ಪ್ರಕರಣಗಳ ಹೊರತಾಗಿ ಗಂಭೀರ ವಿವಾದಗಳಿಲ್ಲದಂತೆ ಪರೀಕ್ಷೆ ಮುಗಿದಿದೆ. ಏಳು ಲಕ್ಷ ಪರೀಕ್ಷಾರ್ಥಿಗಳು ಕಾನ್ಸ್ಟೇಬಲ್ ಹುದ್ದೆಗಾಗಿ ಪರೀಕ್ಷೆ ಬರೆದಿದ್ದಾರೆ.

ಪರೀಕ್ಷಾ ಅಕ್ರಮಗಳನ್ನು ತಪ್ಪಿಸೋದಕ್ಕಾಗಿಯೇ ರಾಜಸ್ಥಾನದ ಪೊಲೀಸ್ ಇಲಾಖೆ ಎರಡು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಯನ್ನ ಬಂದ್ ಮಾಡಿತ್ತು. ಜೋಧರ್ಪುರ್ ಮತ್ತು ಜೈಪುರ್ನಲ್ಲಿ ಶನಿವಾರ ಮತ್ತು ಭಾನುವಾರ ಎಲ್ಲಾ ಮೊಬೈಲ್ ಗಳ ಇಂಟರ್ನೆಟ್ ಸೇವೆಗಳನ್ನ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು.

ಎರಡು ಪಾಳಿಗಳಲ್ಲಿ 78 ನಗರಗಳ 668 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಿಂದಾಗಿ ಸಾಮಾನ್ಯ ಜನಜೀವನ ಮತ್ತು ಕ್ಯಾಬ್ ಸೇವೆಗಳಿಗೂ ಕೆಲ ಕಾಲ ತೊಂದರೆ ಉಂಟಾಗಿತ್ತು. ಭಾನುವಾರ ಸಂಜೆ ವೇಳೆಗೆ ಇಂಟರ್ನೆಟ್ ಸೇವೆ ಪುನರಾಂಭಗೊಂಡಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...