alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಆತ್ಮಹತ್ಯೆಗೆ ಶರಣು

tmc

ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಟಿಎಂಸಿ ಬಂಡಾಯ ಅಭ್ಯರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಪ್ರಿಯಾ ಡೇ ಎಂಬಾಕೆ 35 ವಿವಿಧ ಬಗೆಯ ಮಾತ್ರೆಗಳನ್ನು ಸೇವಿಸಿ ಸಾವಿಗೆ ಶರಣಾಗಿದ್ದಾರೆ.

10  ವರ್ಷಗಳ ಕಾಲ ಸುಪ್ರಿಯಾ ವಾರ್ಡ್ ನಂ1ರಲ್ಲಿ ಕೌನ್ಸಿಲರ್ ಆಗಿದ್ದರು. ಸಾವಿಗೂ ಮುನ್ನ ಮತ್ತೆ ತೃಣಮೂಲ ಕಾಂಗ್ರೆಸ್ ಸೇರುವ ಸುಳಿವು ಕೂಡ ನೀಡಿದ್ದರು. ಆದ್ರೆ ಟಿಎಂಸಿ ಕಾರ್ಯಕರ್ತರ ಬೆದರಿಕೆಯಿಂದ ಖಿನ್ನತೆಗೊಳಗಾಗಿ ಸುಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಅವರ ಪತಿ ಸಮೀರ್ ಆರೋಪಿಸಿದ್ದಾರೆ.

ಆದ್ರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಿಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಡುವುದು ಟಿಎಂಸಿ ನಾಯಕರಿಗೆ ಬಿಟ್ಟ ವಿಚಾರ ಎಂದಿದ್ದಾರೆ. ಕೇವಲ 30 ಮತಗಳಿಂದ ತಾನು ಟಿಎಂಸಿ ಅಭ್ಯರ್ಥಿ ಅಸೋಕೆ ಸರ್ಕಾರ್ ವಿರುದ್ಧ ಸೋಲು ಅನುಭವಿಸಿದ್ದೇನೆ ಅನ್ನೋ ಸುದ್ದಿ ಬೆಳಗ್ಗೆ 8.40ರ ವೇಳೆಗೆ ಸುಪ್ರಿಯಾಗೆ ಗೊತ್ತಾಗಿತ್ತು.

ಸುಪ್ರಿಯಾ 320 ಮತಗಳನ್ನು ಪಡೆದ್ರೆ, ಅಸೋಕೆಗೆ 350 ಮತಗಳು ಬಂದಿದ್ದವು. 179 ವೋಟುಗಳು ಇನ್ನೋರ್ವ ಸ್ವತಂತ್ರ ಅಭ್ಯರ್ಥಿ ಪಾಲಾಗಿದ್ದವು. ಮತದಾನದ ದಿನ ತನ್ನ ಅಜ್ಜನ ಬದಲು ವೋಟ್ ಮಾಡಲು ಬಂದಿದ್ದ ಮೊಮ್ಮಗನಿಗೆ ಸುಪ್ರಿಯಾ ಕಪಾಳ ಮೋಕ್ಷ ಮಾಡಿದ್ದರು.

ಇದೇ ವಾರ್ಡ್ ನಲ್ಲಿ 2007 ಮತ್ತು 2012ರಲ್ಲಿ ಸುಪ್ರಿಯಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. ನಂತರ ಟಿಎಂಸಿ ಸೇರಿದ್ದರು. ಆದ್ರೆ ಈ ಬಾರಿ ಟಿಎಂಸಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಪ್ರಿಯಾ ಹೆಸರೇ ಇರಲಿಲ್ಲ. ಇದರಿಂದ ನೊಂದು ಆಕೆ ಟಿಎಂಸಿ ತ್ಯಜಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಫಲಿತಾಂಶ ಬಂದು ಎರಡು ಗಂಟೆಗಳ ಬಳಿಕ ಬೈಕ್ ನಲ್ಲಿ ಬಂದಿದ್ದ ಟಿಎಂಸಿ ಕಾರ್ಯಕರ್ತರು ಸುಪ್ರಿಯಾರನ್ನು ನಿಂದಿಸಿದ್ದಲ್ಲದೆ ಮನೆಗೆ ನುಗ್ಗಲು ಯತ್ನಿಸಿದ್ದರಂತೆ. ನಂತರ ಮನೆಯೊಳಕ್ಕೆ ತೆರಳಿದ ಸುಪ್ರಿಯಾ ಬಿಪಿ, ಶುಗರ್, ಥೈರಾಯ್ಡ್ ಎಲ್ಲಾ ಮಾತ್ರೆಗಳನ್ನು ನುಂಗಿಬಿಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ್ರೂ ಪ್ರಯೋಜನವಾಗಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...