alex Certify
ಕನ್ನಡ ದುನಿಯಾ       Mobile App
       

Kannada Duniya

ಮಾದರಿ ಕಾರ್ಯ ಮಾಡಿದ್ದಾರೆ ನಿವೃತ್ತ ಮುಖ್ಯ ಶಿಕ್ಷಕಿ

ತಮಿಳುನಾಡಿನ ಈರೋಡ್ ಜಿಲ್ಲೆಯ ನಿವೃತ್ತ ಮುಖ್ಯ ಶಿಕ್ಷಕಿಯೊಬ್ಬರು ಮಾದರಿ ಕಾರ್ಯವೊಂದನ್ನು ಮಾಡಿದ್ದಾರೆ. ಶಾಲೆಯೊಂದನ್ನು ಉನ್ನತ ದರ್ಜೆಗೇರಿಸುವ ಸಂದರ್ಭದಲ್ಲಿ ಹೆಚ್ಚುವರಿ ಕಟ್ಟಡ ಕಟ್ಟಲು ಜಾಗದ ಕೊರತೆ ಕಂಡು ಬಂದ ವೇಳೆ ಸುಮಾರು 4 ಕೋಟಿ ರೂ. ಮೌಲ್ಯದ 1 ಎಕರೆ ಜಾಗವನ್ನು ದಾನವಾಗಿ ನೀಡುವ ಮೂಲಕ ಸಾರ್ಥಕ ಕಾರ್ಯ ಮಾಡಿದ್ದಾರೆ.

ಚಿತ್ತೋಡಿನ ನಲಗೌಂಡಪಾಳ್ಯಂ ಗ್ರಾಮದ 80 ವರ್ಷದ ನಿವೃತ್ತ ಮುಖ್ಯ ಶಿಕ್ಷಕಿ ಪೊನ್ಮಣಿ ದೇವಿ ಇಂತಹ ಮಹಾನ್ ಕಾರ್ಯ ಮಾಡಿದ್ದು, 1964 ರಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದ ಅವರು 32 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ 1996 ರಲ್ಲಿ ನಿವೃತ್ತರಾಗಿದ್ದರು.

ಅವರ ಪತಿ ಕುಮಾರನಟರಾಜನ್ ವರದಪ್ಪನ್ ನಿಧನರಾದ ಬಳಿಕ ವೈದ್ಯರಾಗಿದ್ದ ಮಗ ಮಯೂರ ಕಾರ್ತಿಕೇಯನ್ ಜೊತೆ ಪೊನ್ಮಣಿ ದೇವಿ ನೆಲೆಸಿದ್ದು, ಆದರೆ ಅವಘಡವೊಂದರಲ್ಲಿ ಮಗನನ್ನೂ ಕಳೆದುಕೊಂಡ ಬಳಿಕ ಒಬ್ಬಂಟಿಯಾಗಿದ್ದರು. ತಮ್ಮ ಸಹೋದರಿ ಹಾಗೂ ಆಕೆಯ ಪುತ್ರನ ಆರೈಕೆಯಲ್ಲಿರುವ ಪೊನ್ಮಣಿ ದೇವಿ, ಈ ಹಿಂದೆಯೂ ಸರ್ಕಾರಿ ಶಾಲೆ ಅಭಿವೃದ್ದಿಗೆ ಹಾಗೂ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದರು.

ಇದೀಗ ಚಿತ್ತೋಡಿನ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯನ್ನು ಉನ್ನತ ದರ್ಜೆಗೇರಿಸಲು ಜಿಲ್ಲಾಡಳಿತ ಮುಂದಾದ ವೇಳೆ ಕಟ್ಟಡ ಕಟ್ಟಲು ಜಾಗದ ಕೊರತೆ ಕಂಡು ಬಂದಿತ್ತು. ಇದನ್ನು ತಿಳಿದ ಪೊನ್ಮಣಿ ದೇವಿಯರು 4 ಕೋಟಿ ರೂ. ಮೌಲ್ಯದ ಭೂಮಿಯನ್ನು ಹಸ್ತಾಂತರಿಸಿದ್ದಾರೆ. ಪೊನ್ಮಣಿ ದೇವಿಯರು ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಶಿಕ್ಷಣ ಸಚಿವರ ಸಮ್ಮುಖದಲ್ಲೇ ಅವರನ್ನು ಗೌರವಿಸಲು ಜಿಲ್ಲಾಡಳಿತ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...