alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನನ್ನೇ ಪಕ್ಷದಿಂದ ಉಚ್ಛಾಟಿಸಿದ ಮಾಜಿ ಸಿಎಂ

ಹರಿಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಇಂಡಿಯನ್ ನ್ಯಾಷನಲ್ ಲೋಕದಳ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ಚೌಟಾಲಾ ಅವರು ತಮ್ಮ ಮಗನನ್ನೇ ಪಕ್ಷದಿಂದ ಉಚ್ಛಾಟಿಸಿದ್ದಾರೆ. ಪಕ್ಷದಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತ್ರವಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅವರು ಪುತ್ರ ಅಜಯ್ ಸಿಂಗ್ ಚೌಟಾಲಾ ಅವರನ್ನು ತೆಗೆದು ಹಾಕಿದ್ದಾರೆ.

ಮಗ ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡಿರುವುದಕ್ಕಾಗಿ ತಾನು ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಓಂ ಪ್ರಕಾಶ್ ಚೌಟಾಲಾ ಬರೆದಿರುವ ಪತ್ರದ ಮಾಹಿತಿಯನ್ನು ರಾಜ್ಯಾಧ್ಯಕ್ಷ ಅಶೋಕ್ ಅರೋರಾ ಬಹಿರಂಗಪಡಿಸುವ ಮೂಲಕ ಅಧಿಕೃತವಾಗಿ ಈ ವಿಷಯವನ್ನು ತಿಳಿಸಿದ್ದಾರೆ.

ಪಕ್ಷದ ನೀತಿ-ನಿಯಮಗಳಿಗೆ ನಾನು ಯಾವಾಗಲೂ ಬದ್ಧನಾಗಿರುತ್ತೇನೆ. ಪಕ್ಷದ ಧ್ಯೇಯೋದ್ದೇಶಗಳಿಗಿಂತ ನನಗೆ ಯಾರೂ ಮಿಗಿಲಲ್ಲ. ಪಕ್ಷಕ್ಕಾಗಿ ನಾನು ನನ್ನ ಕುಟುಂಬ ಸದಸ್ಯರೂ ಸೇರಿದಂತೆ ಯಾರನ್ನು ಕೂಡ ಎದುರು ಹಾಕಿಕೊಳ್ಳಲು ಸಿದ್ಧ ಎಂದು ಚೌಟಾಲಾ ಪತ್ರಮುಖೇನ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...