alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯೂಟಿ ಸೆಲೂನ್ ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವನು ಅಂದರ್

ತಮಿಳುನಾಡಿನ ಡಿಎಂಕೆ ಪಕ್ಷದ ಮಾಜಿ ಕಾರ್ಪೊರೇಟರ್ ಒಬ್ಬ ಬ್ಯೂಟಿ ಸೆಲೂನ್ ನಲ್ಲಿ ಮಹಿಳೆಯೊಬ್ಬರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದ ಈ ಘಟನೆಯ ದೃಶ್ಯ ಈಗ ಮಾಧ್ಯಮಗಳ ಕಣ್ಣಿಗೆ ಬಿದ್ದಿದೆ. ಪೆರಂಬಲೂರ್ ನಲ್ಲಿ ನಡೆದಿರುವ ಈ ಘಟನೆಯಿಂದ ಈಗ ಡಿಎಂಕೆ ಪಕ್ಷದ ಮಾಜಿ ಕಾರ್ಪೊರೇಟರ್ ಸೆಲ್ವಕುಮಾರ್ ಗೆ ಕಷ್ಟಕಾಲ ಎದುರಾಗಿದೆ.

ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ, ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗ್ತಿದ್ದ ಹಾಗೆ ಡಿಎಂಕೆ ಪಕ್ಷಕ್ಕೂ ಮುಖಭಂಗ ಎದುರಾಗಿದೆ. ಅದೇ ಕಾರಣಕ್ಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಸೆಲ್ವಕುಮಾರ್ ಅವರನ್ನ ವಜಾ ಮಾಡಲಾಗಿದೆ.

2018ರ ಮೇ 25ರಂದು ನಡೆದಿರುವ ಘಟನೆ ಇದು ಅಂತ ಹೇಳಲಾಗ್ತಿದೆ. ದೃಶ್ಯದಲ್ಲಿ ಸೆಲ್ವಕುಮಾರ್ ಮಹಿಳೆಗೆ ಕಾಲಿನಿಂದ ಒದೆಯುವ ದೃಶ್ಯ ಸೆರೆಯಾಗಿದೆ. ದೃಶ್ಯದಲ್ಲಿ ಮೂವರು ಮಹಿಳೆಯರು ಸೆಲ್ವಕುಮಾರ್ ಅವರನ್ನ ತಡೆಯೋಕೆ ಮುಂದಾದ್ರೂ ಅವರು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೂ ಸೆಲ್ವಕುಮಾರ್ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದೇಕೆ ಅನ್ನೋ ಕಾರಣ ಇನ್ನೂ ತಿಳಿದು ಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...