alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರೇಮಿ ಅರೆನಗ್ನ ವಿಡಿಯೋ ಲೀಕ್ ಮಾಡಿದ್ದಕ್ಕೆ ಯುವತಿಗೆ ಶಿಕ್ಷೆ

ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಅಂತಾರಾಲ್ಲ. ಅಂಥದ್ದೇ ಒಂದು ಘಟನೆ ಮೇಘಾಲಯದಲ್ಲಿ ನಡೆದಿದೆ. ಮಾಜಿ ಪ್ರೇಮಿಯೊಬ್ಬ ಯುವತಿಯ ಅರೆನಗ್ನ ಫೋಟೋ, ವಿಡಿಯೋಗಳನ್ನು ಆನ್ ಲೈನ್ ನಲ್ಲಿ ಹರಿಬಿಟ್ಟಿದ್ದಾನೆ.

ಆತ ಮಾಡಿದ ಈ ಕೃತ್ಯಕ್ಕೆ ಯುವತಿಯನ್ನು ತಪ್ಪಿತಸ್ಥೆ ಎಂದು ಪರಿಗಣಿಸಿರುವ ಗ್ರಾಮದ ಹಿರಿಯರು ಆಕೆಗೆ 3000 ರೂ. ದಂಡ ವಿಧಿಸಿದ್ದಾರೆ.

ಮೇಘಾಲಯದ ಗೈರೋಂಗ್ ಗ್ರಾಮದ ಮಾನ್ಸ್ ರಂಗ್ ಸಂಗ್ಮಾ ಎಂಬ ತನ್ನ ಮಾಜಿ ಪ್ರೇಮಿ ಪರಸ್ಪರ ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಕಳೆದ ಏಕಾಂತ ಕ್ಷಣಗಳನ್ನು ತನಗರಿವಿಲ್ಲದಂತೆಯೇ ಸೆರೆ ಹಿಡಿದಿದ್ದ. ಇದು ನನ್ನ ಅರಿವಿಗೆ ಬಂದಾಗ ಅದನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದೆ.

ಆದರೆ ಆತ ಒಪ್ಪಿರಲಿಲ್ಲ. ಇದೀಗ ಪ್ರೀತಿ, ಸಂಬಂಧ ಮುರಿದುಬಿದ್ದಿದ್ದು ಆ ದ್ವೇಷದಲ್ಲಿ ಆತ ತನ್ನ ಅರೆ ನಗ್ನ ಫೋಟೋ, ವಿಡಿಯೋಗಳನ್ನು ಬಹಿರಂಗಗೊಳಿಸಿದ್ದಾನೆ ಎಂದು ಸಂತ್ರಸ್ತ ಯುವತಿ ಮೆಂಡಿಪತರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ದೂರು ದಾಖಲಿಸಿರುವ ಪೊಲೀಸರು ಆರೋಪಿ ಮಾನ್ಸ್ ರಂಗ್ ಸಂಗ್ಮಾನನ್ನು ಬಂಧಿಸಿ ಲಾಠಿ ರುಚಿ ತೋರಿದ್ದಾರೆ. ಇದೀಗ ಯುವತಿ ಗ್ರಾಮದ ಹಿರಿಯರ ವಿರುದ್ಧ ಕಾನೂನು ಸಮರ ಸಾರಲು ಸಜ್ಜಾಗಿದ್ದಾಳೆ ಎಂದು ತಿಳಿದು ಬಂದಿದ್ದು, ಮಹಿಳಾ ಆಯೋಗವೂ ಸಂತ್ರಸ್ತೆಯ ನೆರವಿಗೆ ಧಾವಿಸಿರುವ ಕಾರಣ ಆಕೆಯ ಹೋರಾಟಕ್ಕೆ ಬಲ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...