alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟ್ ಎಫೆಕ್ಟ್: ಕಾಶ್ಮೀರದಲ್ಲಿ ಬಂದ್ ಆಯ್ತು ಪ್ರೊಟೆಸ್ಟ್

stonepelter

ಶ್ರೀನಗರ: ಕಪ್ಪುಹಣ, ನಕಲಿ ನೋಟು, ಭಯೋತ್ಪಾದನೆ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 500 ರೂ., 1000 ರೂ. ಮುಖಬೆಲೆಯ ನೋಟ್ ಗಳನ್ನು ರದ್ದುಪಡಿಸಲಾಗಿದೆ.

ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ದಿನಬೆಳಗಾದರೆ ನಡೆಯುತ್ತಿದ್ದ ಪುಂಡಾಟಿಕೆ, ಪ್ರತಿಭಟನೆ ಇಲ್ಲವಾಗಿವೆ. ಕಾಶ್ಮೀರಿ ಪುಂಡ ಯುವಕರಿಗೆ 500 ರೂ. ಕೊಟ್ಟು ಕಲ್ಲು ಹೊಡೆಯುವ ಕೆಲಸಕ್ಕೆ ಹಚ್ಚುತ್ತಿದ್ದ ಪ್ರತ್ಯೇಕತಾವಾದಿಗಳ ಕೈಯಲ್ಲಿರುವ ದೊಡ್ಡ ಮೊತ್ತದ ನೋಟುಗಳಿಗೆ ಬೆಲೆ ಇಲ್ಲ. ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಬದಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಯುವಕರಿಗೆ ಕೊಡಲು ಹಣವಿಲ್ಲದಂತಾಗಿದೆ.

ಹಣ ಸಿಗದೇ ಯುವಕರು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಪ್ರತಿಭಟನೆಗೆ ಬಂದರೂ ಅವರು 500 ರೂ. 1000 ರೂ ನೋಟು ಪಡೆಯುತ್ತಿಲ್ಲ.

ಒಟ್ಟಿನಲ್ಲಿ ನೋಟ್ ಬಂದ್ ಮಾಡಿದ್ದು, ಪರಿಣಾಮ ಬೀರಿದೆ. ಯುವಕರು ಬೀದಿಗಳಿಯದೇ ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಬುರ್ಹಾನ್ ವಾನಿ ಹತ್ಯೆ ಬಳಿಕ ಒಂದಲ್ಲ ಒಂದು ಪ್ರತಿಭಟನೆ, ತಡೆಯಲು ಬಂದ ಪೊಲೀಸರು, ಸೇನೆಯ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿತ್ತು. ಈಗ ಅಂತಹ ಚಟುವಟಿಕೆಗಳು ನಿಂತಿವೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...