alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹ ಸಂತ್ರಸ್ಥರಿಗೆ ಈ ಮೂಲಕ ನೆರವಾಗ್ತಿದೆ ಗೂಗಲ್

ಕೇರಳದಲ್ಲಿ ಪ್ರವಾಹದಲ್ಲಿ ಸಿಲುಕಿರುವವರು, ಇಂಟರ್ನೆಟ್‌ ಸಂಪರ್ಕ ಇಲ್ಲದೆಯೂ ಗೂಗಲ್‌ ಲೊಕೇಶನ್‌ ಶೇರ್‌ ಮಾಡಬಹುದು ಎಂದು ಗೂಗಲ್‌ ತಿಳಿಸಿದೆ. ಆಂಡ್ರಾಯ್ಡ್ ಅಥವಾ ಟ್ಯಾಬ್ಲೆಟ್‌ ಬಳಕೆದಾರರು ಗೂಗಲ್‌ನಲ್ಲಿ ಪ್ಲಸ್‌ ಕೋಡ್‌ ಬಳಸಿ, ತಾವಿರುವ ಪಕ್ಕಾ ಸ್ಥಳದ ಮಾಹಿತಿಯನ್ನು ಶೇರ್‌ ಮಾಡಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.

ಪ್ಲಸ್‌ ಕೋಡ್‌ಗಳನ್ನು ವಾಯ್ಸ್‌ ಅಥವಾ ಎಸ್‌ಎಂಎಸ್‌ ಮೂಲಕ ಕಳುಹಿಸಬಹುದು. ಈ ಸಂಖ್ಯೆಯನ್ನು ಗೂಗಲ್‌ ಮ್ಯಾಪ್‌ನಲ್ಲಿನ ಅಡ್ರೆಸ್‌ ಬಾರ್‌ನಲ್ಲಿ ಹಾಕಿದರೆ, ಸ್ಥಳದ ಪಕ್ಕಾ ಮಾಹಿತಿ ಲಭ್ಯವಾಗುತ್ತದೆ ಎಂದು ವಿವರಿಸಲಾಗಿದೆ. ಡಿಸ್‌ಕ್ರಿಪ್ಶನ್‌ ಅಥವಾ ಅಡ್ರೆಸ್‌ ಹಾಕುವ ಜಾಗದಲ್ಲಿ ಸ್ಕ್ರಾಲ್ ಮಾಡಿದರೆ, ಪ್ಲಸ್‌ ಕೋಡ್‌ ಸಿಗಲಿದೆ. ಅಡ್ರೆಸ್‌ ಹಾಕಿದರೆ, ಗೂಗಲ್‌ ಪತ್ತೆ ಹಚ್ಚದೇ ಹೋದಲ್ಲಿ ಪ್ಲಸ್‌ ಕೋಡ್‌ ಮೂಲಕ ನಿಖರ ಸ್ಥಳವನ್ನು ಕಾಣಬಹುದಾಗಿದೆ. ಪ್ರವಾಹದಲ್ಲಿ ಸಿಲುಕಿಕೊಂಡಿರುವವರು, ಗೂಗಲ್‌ ಮ್ಯಾಪ್‌ನ ಸಹಾಯದಿಂದ ರಕ್ಷಣೆಗೆ ಈ ವ್ಯವಸ್ಥೆ ಬಳಸಬಹುದಾಗಿದೆ.

ಕೇರಳ ಸರಕಾರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸುಮಾರು 10 ಸಾವಿರ ಕಿ.ಮೀ. ನಷ್ಟು ರಸ್ತೆಗಳಿಗೆ ಹಾನಿಯಾಗಿವೆ. ಸಾವಿರಾರು ಮನೆಗಳು ಕುಸಿದು ಬಿದ್ದಿವೆ. ಇದೇ ವೇಳೆ ಕೈಗಾರಿಕೆ, ಪ್ರವಾಸೋದ್ಯಮ, ರಬ್ಬರ್‌ ಇಂಡಸ್ಟ್ರಿಗಳಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ನಷ್ಟವಾಗಿದೆ. ಈವರೆಗೆ 7 ಸಾವಿರ ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 6 ಸಾವಿರ ಮಂದಿ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಸೇನಾ ಪಡೆ, ನೌಕಾ ಪಡೆ ಹಾಗೂ ವಾಯುಪಡೆಯ ಯೋಧರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...