alex Certify
ಕನ್ನಡ ದುನಿಯಾ       Mobile App
       

Kannada Duniya

ಗುಂಡು ತಗುಲಿದ್ರೂ ಮದುವೆ ಮನೆಗೆ ಬಂದ ವರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಮದುವೆಗೆ ಮೆರವಣಿಗೆಯಲ್ಲಿ ಹೊರಟಿದ್ದ ವರನ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆ ದೆಹಲಿಯ ಮದನಗಿರಿ ಪ್ರದೇಶದಲ್ಲಿ ನಡೆದಿದೆ.

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ದಿಬ್ಬಣದ ಜೊತೆ ವರ, ಮದುವೆ ಮನೆಗೆ ಹೊರಟಿದ್ದ. ಈ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹೊಡೆದಿದ್ದಾರೆ. ಮದುವೆ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಹಾಡಿಗೆ ನೃತ್ಯ ಮಾಡ್ತಾ ವರನ ಕಡೆಯವರು ಮದುವೆ ಮಂಟಪಕ್ಕೆ ಹೊರಟಿದ್ದರು. ಈ ವೇಳೆ ಅಲ್ಲಿಗೆ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಗುಂಡು ವರನ ಭುಜಕ್ಕೆ ತಾಗಿದೆ.

ವರ ಮನೆಯವರನ್ನು ಕೂಗಿದ್ದಾನೆ. ಆದ್ರೆ ಸಂಗೀತದ ಮಧ್ಯೆ ಅವ್ರಿಗೆ ವರನ ಕೂಗು ಕೇಳಲಿಲ್ಲ. ನಂತ್ರ ಕುದುರೆಯಿಂದ ಕೆಳಗೆ ಇಳಿದ ವರ, ಗುಂಡು ತಗಲಿರುವ ವಿಷ್ಯ ಹೇಳಿದ್ದಾನೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಸತತ ಮೂರು ಗಂಟೆ ಪ್ರಯತ್ನದ ನಂತ್ರ ಗುಂಡು ತೆಗೆಯಲಾಗಿದೆ. ಚಿಕಿತ್ಸೆ ನಂತ್ರ ಮದುವೆ ಮನೆಗೆ ಬಂದ ವರ, ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನಂತೆ. ಗುಂಡು ಹಾರಿಸಿರುವುದಕ್ಕೆ ಕಾರಣ ಗೊತ್ತಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...