alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕ ಇಳಿಸಿದ್ರೂ ಇನ್ನೆಂದೂ ನಡೆಯಲಾರಳು ಎಮನ್!

eman-7595

ಜಗತ್ತಿನ ಅತ್ಯಂತ ತೂಕದ ಮಹಿಳೆ ಎನಿಸಿಕೊಂಡಿದ್ದ ಎಮನ್ ಅಹ್ಮದ್ ಈಗ ಬರೋಬ್ಬರಿ 242 ಕೆಜಿ ತೂಕ ಕಳೆದುಕೊಂಡಿದ್ದಾಳೆ. ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ಎಮನ್ ಗೆ ಮಾರ್ಚ್ 7ರಂದು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಎಮನ್ ಎದ್ದು ಕುಳಿತುಕೊಳ್ಳುವಷ್ಟು ಚೇತರಿಸಿಕೊಂಡಿದ್ದಾಳೆ. ಆಕೆಯ ಥೈರಾಯ್ಡ್ ಕೂಡ ಸಹಜ ಸ್ಥಿತಿಯಲ್ಲಿದೆ.

ಆದ್ರೆ ಅರ್ಧದಷ್ಟು ತೂಕ ಕಳೆದುಕೊಂಡಿದ್ರೂ ಎಮನ್ ಅಹ್ಮದ್ ಜೀವನದಲ್ಲಿ ಇನ್ನೆಂದೂ ನಡೆಯಲು ಸಾಧ್ಯವಿಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ. 11 ವರ್ಷದವಳಿದ್ದಾಗ್ಲೇ ಎಮನ್ ಗೆ ಪಾರ್ಶ್ವವಾಯು ಬಡಿದಿತ್ತು. ಆಗಲೇ ಆಕೆಯ ಕಾಲುಗಳು ಬೆಳವಣಿಗೆ ನಿಲ್ಲಿಸಿಬಿಟ್ಟಿವೆಯಂತೆ.

ಕಳೆದ 25 ವರ್ಷಗಳಿಂದ ಎಮನ್ ಹಾಸಿಗೆಯಲ್ಲಿ ಮಲಗಿಯೇ ಇದ್ಲು. ಎದ್ದು ಕೂರಲು ಕೂಡ ಅವಳಿಂದ ಸಾಧ್ಯವಾಗುತ್ತಿರಲಿಲ್ಲ. ಈಗ ತೂಕ ಕಡಿಮೆಯಾಗಿದ್ರೂ ಕಾಲುಗಳಲ್ಲಿ ಬಲವಿಲ್ಲದ ಕಾರಣ ಇನ್ನೆಂದೂ ಆಕೆ ನಡೆಯಲಾರಳು ಅಂತಾ ವೈದ್ಯರು ತಿಳಿಸಿದ್ದಾರೆ.

ಸದ್ಯ ಒಬೆಸಿಟಿಗೆ ಸಂಬಂಧಿಸಿದಂತಹ ಚಿಕಿತ್ಸೆ ಮುಗಿದಿದ್ದು, ನ್ಯೂರಾಲಜಿಗೆ ಸಂಬಂಧಪಟ್ಟಂತೆ ಎಮನ್ ಗೆ ಟ್ರೀಟ್ಮೆಂಟ್ ಕೊಡಲಾಗುತ್ತಿದೆ. ಇನ್ನು 50 ಕೆಜಿ ತೂಕ ಕಡಿಮೆ ಮಾಡಿದ ನಂತರ ಎಮನ್ ಳನ್ನು ಸಿಟಿ ಸ್ಕ್ಯಾನ್ ಗೆ ಒಳಪಡಿಸಲು ವೈದ್ಯರು ಮುಂದಾಗಿದ್ದಾರೆ.

ಅಪರೂಪದ ಆನುವಂಶಿಕ ದೋಷದಿಂದಾಗಿಯೇ ಎಮನ್ ಗೆ ಈ ರೀತಿ ಬೊಜ್ಜು ಬಂದಿದೆ ಅನ್ನೋದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ನಾಲ್ಕು ತಿಂಗಳ ನಂತರ ಎಮನ್ ಳನ್ನು ಭಾರತದಿಂದ ಇಜಿಪ್ಟ್ ಗೆ ಕಳಿಸಿಕೊಡಲು ವೈದ್ಯರು ಮುಂದಾಗಿದ್ದರು. ಆದ್ರೀಗ ಸಂಪೂರ್ಣ ಚಿಕಿತ್ಸೆಯ ಬಳಿಕವೇ ಅವಳನ್ನು ವಾಪಸ್ ಕಳಿಸಲು ನಿರ್ಧರಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...