alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯರು ಬದುಕಿರುವಾಗಲೇ ಶ್ರಾದ್ಧ ಮಾಡಿದ ಪತಿಯಂದಿರು…!

ವಾರಾಣಸಿ: ಪತ್ನಿಯರಿಂದ ಪೀಡಿತರಾಗಿರುವ ಗಂಡಸರ ರಕ್ಷಣೆಗೆ ಕಾನೂನು ಜಾರಿ ಮಾಡಬೇಕು ಎಂದು ಬಿಜೆಪಿ ಸಂಸದರೊಬ್ಬರು ಇತ್ತೀಚೆಗೆ ಪ್ರಸ್ತಾಪಿಸಿದಾಗ ನಕ್ಕವರೇ ಹೆಚ್ಚು. ಆದರೆ ಆ ಸಂಸದ ಹರಿನಾರಾಯಣ್ ರಾಜಭರ್ ಮಾತಿಗೆ ಪುಷ್ಠಿ ನೀಡುವ ಘಟನೆಯೊಂದು ನಡೆದಿದ್ದು, ತಮ್ಮ ಜೀವನವನ್ನೆ ನರಕವಾಗಿಸಿದ ಪತ್ನಿಯರು ಬದುಕಿರುವಾಗಲೇ ನೂರಾರು ಪತಿಯಂದಿರು ಶ್ರಾದ್ಧ ಕರ್ಮ, ಅಂತಿಮ ಸಂಸ್ಕಾರ ಹಾಗೂ ಹೆಣ್ಣುಪಿಶಾಚಿ ದೂರ ಮಾಡುವ ಪೂಜಾ ಕರ್ಮ ಮಾಡಿದ್ದಾರೆ.

ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ (ಎಸ್ಐಎಫ್ಎಫ್) ಎಂಬ ಸ್ವಯಂ ಸೇವಾ ಸಂಸ್ಥೆ ನೇತೃತ್ವದಲ್ಲಿ ಪವಿತ್ರ ಕ್ಷೇತ್ರ ವಾರಾಣಸಿಯಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸುಮಾರು 160 ವಿಚ್ಛೇದಿತ ಪತಿಯರು ಪಿಂಡದಾನ, ಶ್ರಾದ್ಧ ಕರ್ಮ ಮತ್ತು ಪಿಶಾಚಿನಿ ಮುಕ್ತಿ ಪೂಜೆ ನೆರವೇರಿಸಿದರು.

ವರದಕ್ಷಿಣೆ ಕಿರುಕುಳ ತಡೆಗಟ್ಟಲು ರೂಪಿಸಲಾಗಿರುವ ಕಾನೂನು ದುರುಪಯೋಗದಿಂದ ತಮ್ಮ ಬಾಳು‌ ನರಕವಾಗಿದೆ ಎಂಬುದು ವಿಚ್ಛೇದಿತರ ಮೊದಲ ಅಳಲು. ಈ ಕಾಯ್ದೆ ದುರುಪಯೋಗ ಆಗುತ್ತಿದ್ದು, ತಡೆಗಟ್ಟಲು ಕೆಲವು ರಕ್ಷಣಾ ಕ್ರಮಗಳನ್ನು ಸುಪ್ರೀಂಕೋರ್ಟ್ ನ ದ್ವಿಸದಸ್ಯ ಪೀಠ 2018 ರಲ್ಲಿ ಪ್ರಕಟಿಸಿತ್ತು. ಆದರೆ ಈ ಆದೇಶಕ್ಕೆ ತ್ರಿಸದಸ್ಯ ಪೀಠ ತಡೆ ನೀಡಿ, ಈ ಆದೇಶವನ್ನು ಪುನರಾವಲೋಕಿಸಲು ಅಮಿಕಸ್ ಕ್ಯೂರಿ ನೇಮಕ ಮಾಡಿತ್ತು.

ಬಹಳಷ್ಟು ಮಂದಿ ಪತಿಯಂದಿರು ತಮ್ಮ ಹೆಂಡತಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಅಂಕಿಅಂಶಗಳಿಂದ ತಿಳಿಯಬಹುದು. ಇವೆಲ್ಲ ಮಾನಸಿಕ ಹಿಂಸೆಗಳಿಂದ ಮುಕ್ತರಾಗಲು ಸಾಂಕೇತಿಕವಾಗಿ ಈ ಶ್ರಾದ್ಧ ಕರ್ಮಗಳನ್ನು ಮಾಡುತ್ತಿದ್ದೇವೆ. ಪುರುಷ ಆಯೋಗ ರಚನೆ ಕುರಿತು ಗಂಭೀರ ಚಿಂತನೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದೇವೆ ಎಂದು ಭಾಗವಹಿಸಿದ್ದ ವಿಚ್ಛೇದಿತರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...