alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಮ್ ನಲ್ಲಿ ಯುವಕನ ಪೈಶಾಚಿಕ ಕೃತ್ಯ

indore-gym-650-ani_650x400_41503128921

ಮಧ್ಯಪ್ರದೇಶದ ಇಂದೋರ್ ನಲ್ಲಿರೋ ಜಿಮ್ ಒಂದರಲ್ಲಿ ಕೆಲಸ ಮಾಡ್ತಾ ಇದ್ದ ಮಹಿಳೆ ಮೇಲೆ ಯುವಕ ಮಾಡಿರೋ ದೌರ್ಜನ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಲೀವ್ ಲೆಸ್ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ವ್ಯಾಯಾಮ ಮಾಡಲು ಸಜ್ಜಾಗಿದ್ದ. ಆತನ ಹಿಂದೆ ನಿಂತಿದ್ದ ಯುವತಿ ಏನೋ ಹೇಳಿದ್ದಾಳೆ.

ಅಷ್ಟಕ್ಕೇ ಸಹನೆ ಕಳೆದುಕೊಂಡ ಯುವಕ ಆಕೆಯ ತಲೆಗೆ ಗುದ್ದಿದ್ದಾನೆ. ನೋವು ತಾಳಲಾಗದೆ ತಲೆ ಹಿಡಿದುಕೊಂಡ ಯುವತಿ ಅಲ್ಲೇ ಕುಸಿದು ಬಿದ್ಲು. ಜಿಮ್ ನಲ್ಲಿದ್ದ ಉಳಿದವರು ನೆರವಿಗೆ ಧಾವಿಸಿ ಬಂದ್ರು. ಆದ್ರೆ ಆ ಕ್ರೂರ ಯುವಕ ಮಾತ್ರ ಅಷ್ಟಕ್ಕೆ ಸುಮ್ಮನಾಗಲಿಲ್ಲ.

ಆಕೆಯ ಮೊಣಕಾಲಿಗೆ ಝಾಡಿಸಿ ಒದ್ದಿದ್ದಾನೆ. ನೋವು ತಡೆಯಲಾಗದೆ ಯುವತಿ ಒದ್ದಾಡಿ ಹೋದ್ಲು. ಕೊನೆಗೆ ಜಿಮ್ ನಲ್ಲಿದ್ದ ಉಳಿದ ಸದಸ್ಯರು ಆ ಯುವಕನನ್ನು ಪಕ್ಕಕ್ಕೆ ಎಳೆದೊಯ್ದರು. ಈ ವಿಡಿಯೋ ವೈರಲ್ ಆಗಿದ್ದು, ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...