alex Certify
ಕನ್ನಡ ದುನಿಯಾ       Mobile App
       

Kannada Duniya

ಅನೈತಿಕ ಸಂಬಂಧಕ್ಕೆ ಆಕ್ರೋಶ: ಗುಪ್ತಾಂಗಕ್ಕೆ ಬಿಸಿ ಎಣ್ಣೆ

ಮಧುರೈ: ಅಕ್ರಮ ಸಂಬಂಧದಿಂದ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಮಧುರೈನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ಪತಿಯ ಗುಪ್ತಾಂಗಕ್ಕೆ ಬಿಸಿ ಎಣ್ಣೆ ಸುರಿದಿದ್ದಾಳೆ.

37 ವರ್ಷದ ಎಂ. ಪರಮೇಶ್ವರಂ ಮೇಲೆ ದಾಳಿ ಮಾಡಿದ ಆತನ ಪತ್ನಿ ಪಿ. ಶಶಿಕಲಾ(30) ಗುಪ್ತಾಂಗದ ಮೇಲೆ ಎಣ್ಣೆ ಸುರಿದು ಸೇಡು ತೀರಿಸಿಕೊಂಡಿದ್ದಾಳೆ. ಪರಮೇಶ್ವರಂ –ಶಶಿಕಲಾ ದಂಪತಿಗೆ ಮೂವರು ಮಕ್ಕಳಿದ್ದು, ನೆಹರೂ ನಗರದಲ್ಲಿ ವಾಸವಾಗಿದ್ದಾರೆ.

ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಪರಮೇಶ್ವರ್, ವಿರಾಟಿಪತುವಿನಲ್ಲಿ ವಾಸವಾಗಿರುವ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದ. ಈ ವಿಚಾರ ಮನೆಯಲ್ಲಿ ಗೊತ್ತಾಗಿ ದಂಪತಿ ನಡುವೆ ಜಗಳವಾಗಿದೆ. ಆದರೂ, ತಲೆ ಕೆಡಿಸಿಕೊಳ್ಳದ ಪರಮೇಶ್ವರಂ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಮುಂದುವರೆಸಿದ್ದಾನೆ.

ಇದರಿಂದ ಆಕ್ರೋಶಗೊಂಡ ಶಶಿಕಲಾ ಪತಿಯ ಗುಪ್ತಾಂಗದ ಮೇಲೆ ಬಿಸಿ ಎಣ್ಣೆ ಸುರಿದಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಪರಮೇಶ್ವರಂನನ್ನು ರಾಜಾಜಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂಬಂಧ ಎಸ್.ಎಸ್. ಕಾಲೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...