alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆಯ ಹತ್ಯೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

ಹೈದರಾಬಾದ್‌: ಪ್ರೀತಿ ನಿರಾಕರಿಸಿದ್ದಕ್ಕಾಗಿ 16 ವರ್ಷದ ಬಾಲಕಿಯನ್ನು ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಹೈದರಾಬಾದ್‌ನ ಹೊರವಲಯದಲ್ಲಿನ ಬೊಲ್ಲರಮ್‌ ಬಳಿಯ ಇದ್ದ ನಿಖಿತಾ(16) ಮೃತ ಬಾಲಕಿ.

ಮಹಾರಾಷ್ಟ್ರದ ಖಾಸಗಿ ಕಾಲೇಜಿನಲ್ಲಿ 3ನೇ ವರ್ಷದ ಎಂಜಿನಿಯರಿಂಗ್‌ ಕಲಿಯುತ್ತಿರುವ ಅರವಿಂದ್‌, ಕಳೆದ ಕೆಲವು ದಿನಗಳಿಂದ ನಿಖಿತಾಳನ್ನು ಹಿಂಬಾಲಿಸುತ್ತಿದ್ದ. ನಿಖಿತಾ ಈ ಬಗ್ಗೆ ಸಿಟ್ಟಾಗಿ ಹಲವು ಬಾರಿ, ಅರವಿಂದ್‌ಗೆ ಎಚ್ಚರಿಕೆ ನೀಡಿದ್ದಳು. ಅಲ್ಲದೆ ಅರವಿಂದ್‌ ಮೇಲೆ ತನಗೆ ಆಸಕ್ತಿ ಇಲ್ಲ ಎಂದೂ ನೇರವಾಗಿ ಹೇಳಿದ್ದಳು.

ಗುರುವಾರ ಸಂಜೆ ನಿಖಿತಾಳ ಮನೆಗೆ ಬಂದ ಅರವಿಂದ್, ಅವಳ ಜತೆ ವಾಗ್ವಾದಕ್ಕಿಳಿದಿದ್ದಾನೆ. ಪ್ರೀತಿ ಒಪ್ಪಿಕೊಳ್ಳುವಂತೆ ಪೀಡಿಸಿದ್ದಾನೆ. ನಿಖಿತಾ ನಿರಾಕರಿಸಿದ್ದಾಳೆ. ಇದಕ್ಕೆ ಸಿಟ್ಟಾದ ಅರವಿಂದ್‌ ಚೂರಿಯಿಂದ ಕತ್ತು ಸೀಳಿದ್ದಾನೆ. ನಿಖಿತಾಳ ಚೀರಾಟದಿಂದ ನೆರೆ ಮನೆಯವರು ಧಾವಿಸಿದ್ದು, ಅರವಿಂದ್‌ ಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ತೀವ್ರ ರಕ್ತಸ್ರಾವದಿಂದ ನಿಖಿತ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...