alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ್ಳೆ ಕೆಲಸಕ್ಕೆ ಹೋದ ಎಂಜಿನಿಯರ್ ದುರಂತ ಸಾವು

power-supply-electricity-wire-pole_650x400_61492601346

ದೆಹಲಿಯಲ್ಲಿ ವಿದ್ಯುತ್ ಕಳ್ಳತನದ ವಿರುದ್ಧ ನಡೆಸಿದ ಹೋರಾಟ ಎಂಜಿನಿಯರ್ ನನ್ನು ಬಲಿ ಪಡೆದಿದೆ. 32 ವರ್ಷದ ಎಂಜಿನಿಯರ್ ಅಭಿಮನ್ಯು ಸಿಂಗ್ ಹಾಗೂ ಉಳಿದ ನಾಲ್ವರು ಸಿಬ್ಬಂದಿ ಜಫರ್ಪುರ ಕಲನ್ ಎಂಬಲ್ಲಿ ವಿದ್ಯುತ್ ಕಳ್ಳರ ಮೇಲೆ ದಾಳಿ ನಡೆಸಲು ಬಂದಿದ್ರು.

ಹಳ್ಳಿಯೊಂದರಲ್ಲಿ ಅಪಾರ ಪ್ರಮಾಣದ ವಿದ್ಯುತ್ ಕಳ್ಳತನ ನಡೆಯುತ್ತಿದೆ ಅನ್ನೋ ಮಾಹಿತಿ ಮೇರೆಗೆ ಪೊಲೀಸರ ಜೊತೆಗೆ ಆಗಮಿಸಿದ್ರು. ದಾಳಿ ನಂತರ ಗ್ರಾಮಸ್ತರ ಗುಂಪೊಂದು ಅಧಿಕಾರಿಗಳ ಬೆನ್ನಟ್ಟಿ ಬಂದಿದೆ ಅಂತಾ ಹೇಳಲಾಗ್ತಿದೆ. ಗುಂಪಿನಿಂದ ತಪ್ಪಿಸಿಕೊಳ್ಳಲು ಎಂಜಿನಿಯರ್ ಅಭಿಮನ್ಯು ವೇಗವಾಗಿ ಕಾರು ಚಲಾಯಿಸಿದ್ದಾರೆ.

ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಎಂಜಿನಿಯರ್ ಮೃತಪಟ್ಟಿದ್ದು, ಉಳಿದ ನಾಲ್ವರು ಗಾಯಗೊಂಡಿದ್ದಾರೆ. ಕಳೆದ ತಿಂಗಳು ಕೂಡ ಇಂಥದ್ದೇ ಘಟನೆ ನಡೆದಿತ್ತು. ವಿದ್ಯುತ್ ಕಳ್ಳತನ ತಪ್ಪಿಸಲು ಬಂದಿದ್ದ ಸಿಬ್ಬಂದಿ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದರು.

ವಿದ್ಯುತ್ ಕಳ್ಳತನಕ್ಕೆ ಪೊಲೀಸರ ಸಹಕಾರವೂ ಇದೆ ಎನ್ನಲಾಗ್ತಾ ಇದೆ. ಹಾಗಾಗಿ ದೆಹಲಿಯಲ್ಲಿ ಇದೊಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಕಳೆದ 4 ವರ್ಷಗಳಲ್ಲಿ 14,000ಕ್ಕೂ ಹೆಚ್ಚು ವಿದ್ಯುತ್ ಕಳ್ಳತನ ಪ್ರಕರಣಗಳು ದಾಖಲಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...