alex Certify
ಕನ್ನಡ ದುನಿಯಾ       Mobile App
       

Kannada Duniya

40 ವರ್ಷಗಳ ಬಳಿಕ ಪದವಿ ಪಡೆಯಲು ಮುಂದಾದ ಶಾಸಕ…!

ಏಳನೇ ತರಗತಿಗೆ ಶಾಲೆ ತೊರೆದಿದ್ದ ಶಾಸಕರೊಬ್ಬರು ತಮ್ಮ ಹೆಣ್ಣುಮಕ್ಕಳ ಒತ್ತಾಯದ ಮೇರೆಗೆ ಬರೋಬ್ಬರಿ 40 ವರ್ಷಗಳ ಬಳಿಕ ಪದವಿ ಪಡೆಯುವ ಸಲುವಾಗಿ ಕಾಲೇಜು ಮೆಟ್ಟಿಲು ಏರಿದ್ದಾರೆ.

ರಾಜಸ್ಥಾನದ ಉದಯಪುರ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ 55 ವರ್ಷದ ಪೂಲ್ ಸಿಂಗ್ ಮೀನಾ, ಇಂಥದೊಂದು ಅಪರೂಪದ ಸಾಧನೆ ಮಾಡಲು ಮುಂದಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಪೂಲ್ ಸಿಂಗ್ ಏಳನೇ ತರಗತಿಯಲ್ಲಿದ್ದಾಗ ಸೇನೆಯಲ್ಲಿದ್ದ ಅವರ ತಂದೆ ಸಾವನ್ನಪ್ಪಿದ್ದರಂತೆ. ಕುಟುಂಬ ಮುನ್ನಡೆಸುವ ಜವಾಬ್ದಾರಿಯಿದ್ದ ಕಾರಣ ಶಾಲೆ ಬಿಟ್ಟ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು.

ಆ ಬಳಿಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದು ಬಿಡುವಿಲ್ಲದ ಕಾರಣ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಂಡಿತ್ತು. ಆದರೆ ಅವರ ಐವರು ಹೆಣ್ಣು ಮಕ್ಕಳು ಪದೇ ಪದೇ ತಮ್ಮ ತಂದೆಗೆ ವಿದ್ಯಾಭ್ಯಾಸದ ಮಹತ್ವವನ್ನು ತಿಳಿಸಿ ಕೊಡುತ್ತಿದ್ದರಲ್ಲದೆ ಅಧಿಕಾರಿಗಳೆದುರು ನೀವು ವಿಷಯ ಮಂಡನೆ ಮಾಡಬೇಕೆಂದರೆ ವಿದ್ಯೆ ಅನಿವಾರ್ಯ ಎಂದು ಹೇಳುತ್ತಿದ್ದರು.

ತಮ್ಮ ಮಕ್ಕಳ ಮಾತಿಗೆ ಮಣಿದ ಪೂಲ್ ಸಿಂಗ್ 10 ಮತ್ತು 12ನೇ ತರಗತಿ ಪರೀಕ್ಷೆಯನ್ನು ಪಾಸಾಗಿದ್ದು, ಇದೀಗ ಬಿಎ ಮೊದಲ ವರ್ಷದ ಪರೀಕ್ಷೆಯನ್ನು ಬರೆದಿದ್ದಾರೆ. ಇವರ ಕಲಿಕೆಗೆ ಸರ್ಕಾರಿ ಶಾಲೆಯ ಪ್ರಾಂಶುಪಾಲ ಸಂಜಯ್ ಎಂಬವರು ನೆರವಾಗುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...