alex Certify
ಕನ್ನಡ ದುನಿಯಾ       Mobile App
       

Kannada Duniya

ಪಾತಕಿ ಮನೆಯಲ್ಲಿದ್ದ ದುಡ್ಡಿನ ರಾಶಿ ಕಂಡು ದಾಳಿ ಮಾಡಿದವರೇ ದಂಗಾದರು

telangana-encounter

ಹೈದರಾಬಾದ್: ತೆಲಂಗಾಣದಲ್ಲಿ ಕುಖ್ಯಾತ ಗ್ಯಾಂಗ್ ಸ್ಟರ್ ಮಹ್ಹಮದ್ ನಯೀಮ್ ನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಮೆಹಬೂಬ್ ನಗರ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ನಯೀಮ್ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ಸುಮಾರು 40 ಕೊಲೆ, ಸುಲಿಗೆ, ಪ್ರಾಣ ಬೆದರಿಕೆ ಸೇರಿದಂತೆ 100ಕ್ಕೂ ಅಧಿಕ ಪ್ರಕರಣಗಳು ನಯೀಮ್ ವಿರುದ್ಧ ದಾಖಲಾಗಿದ್ದು, ಪೊಲೀಸರಿಗೆ ಬೇಕಾದ ಮೋಸ್ಟ್ ವಾಂಟೆಡ್ ಆಗಿದ್ದ. ಲಿಬಿಯಾ ಸರ್ವಾಧಿಕಾರಿ ಗಡಾಫಿಯಂತೆ ಡ್ರೆಸ್ ಮಾಡಿಕೊಳ್ಳುತ್ತಿದ್ದ ನಯೀಮ್, ತನ್ನ ರಕ್ಷಣೆಗೆ ಯುವತಿಯರನ್ನು ಇಟ್ಟುಕೊಂಡಿದ್ದ. ಮೊದಲು ನಕ್ಸಲ್ ಚಟುವಟಿಕೆಯಲ್ಲಿದ್ದು, ಅಲ್ಲಿಂದ ಹೊರ ಬಂದ ನಂತರ ಪೊಲೀಸ್ ಮಾಹಿತಿದಾರನಾಗಿ, ಹಲವು ನಕ್ಸಲ್ ನಾಯಕರ ಹತ್ಯೆಗೆ ಕಾರಣನಾಗಿದ್ದ.

ಪೊಲೀಸರ ವಿರುದ್ಧವೇ ತಿರುಗಿ ಬಿದ್ದು, ಐ.ಪಿ.ಎಸ್. ಅಧಿಕಾರಿ ವ್ಯಾಸ್ ಸೇರಿದಂತೆ ಹಲವರನ್ನು ಕೊಲೆ ಮಾಡಿದ್ದ ಆರೋಪ ಈತನ ಮೇಲಿದೆ. ನಯೀಮ್ ಹೈದರಾಬಾದ್ ಮೊದಲಾದ ಕಡೆಗಳಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದ. ರಾಜಕಾರಣಿಗಳು, ಉದ್ಯಮಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ.

ಈತನನ್ನು ಎನ್ ಕೌಂಟರ್ ನಲ್ಲಿ ಪೊಲೀಸರು ಮುಗಿಸಿದ್ದಾರೆ. ಇದಾದ ನಂತರ ಹೈದರಾಬಾದ್ ಅಲ್ಕಾಪುರಿಯಲ್ಲಿರುವ ನಯೀಮ್ ಮನೆ ಮೇಲೆ ದಾಳಿ ಮಾಡಲಾಗಿದ್ದು, ಮನೆಯಲ್ಲಿ ಬರೋಬ್ಬರಿ 2.80 ಕೋಟಿ ರೂ ನಗದು ಪತ್ತೆಯಾಗಿದೆ.

ಮನೆಯಲ್ಲಿದ್ದ ಹಣದ ರಾಶಿಯನ್ನು ಕಂಡು ದಾಳಿ ಮಾಡಿದವರೇ ದಂಗಾಗಿದ್ದಾರೆ. ಇದರೊಂದಿಗೆ 2.5 ಕೆ.ಜಿ. ಚಿನ್ನಾಭರಣ, 169 ಸಜೀವ ಗುಂಡುಗಳು ಸೇರಿದಂತೆ ಅನೇಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಮನೆಯಲ್ಲಿದ್ದ 11 ಮಂದಿಯ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...