alex Certify
ಕನ್ನಡ ದುನಿಯಾ       Mobile App
       

Kannada Duniya

ಕಚೇರಿಯಲ್ಲೂ ಕಡ್ಡಾಯವಾಯ್ತು ಹೆಲ್ಮೆಟ್..!?

bihar-helmet-dd

ಪಾಟ್ನಾ: ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಆದರೆ, ಬಿಹಾರದ ಸರ್ಕಾರಿ ಕಚೇರಿಯೊಂದರಲ್ಲಿ ಹೆಲ್ಮೆಟ್ ಹಾಕಿಕೊಂಡೇ ಕೆಲಸ ಮಾಡುತ್ತಾರೆ ನೌಕರರು.

ಪೂರ್ವ ಚಂಪಾರಣ್ ಜಿಲ್ಲೆಯ ಸರ್ಕಾರಿ ಕಚೇರಿಯೊಂದು ಶಿಥಿಲಾವಸ್ಥೆಯಲ್ಲಿದ್ದು, ಮೇಲ್ಛಾವಣಿ ಅಲ್ಲಲ್ಲಿ ಕಳಚಿ ಬಿದ್ದಿದೆ.

ಕೆಲಸ ಮಾಡುವ ಸಂದರ್ಭದಲ್ಲಿ ಮೇಲ್ಛಾವಣಿ ಕಳಚಿ ಬೀಳಬಹುದೆಂಬ ಭಯದಿಂದ ನೌಕರರು ಹೆಲ್ಮೆಟ್ ಧರಿಸಿಕೊಂಡೇ ಕೆಲಸ ಮಾಡುತ್ತಾರೆ.

ಇನ್ನು ಇಲ್ಲಿಗೆ ಕೆಲಸ, ಕಾರ್ಯಗಳಿಗಾಗಿ ಬರುವವರು ಕೂಡ ಹೆಲ್ಮೆಟ್ ಹಾಕಿಕೊಂಡೇ ಬಂದು ಹೋಗುತ್ತಾರೆ. ಬಿಹಾರ ಕಟ್ಟಡ ಬಿಲ್ಡಿಂಗ್ ನಿರ್ಮಾಣ ಇಲಾಖೆ ಕಳೆದ ವರ್ಷವೇ ಈ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಎಂದು ಘೋಷಿಸಿದೆ.

ಹೀಗಿದ್ದರೂ ಕಚೇರಿಯನ್ನು ಸ್ಥಳಾಂತರ ಮಾಡಿಲ್ಲ. ಅನಿವಾರ್ಯವಾಗಿ ನೌಕರರು ಇಲ್ಲೇ ಕಾರ್ಯ ನಿರ್ವಹಿಸಬೇಕಿದೆ. ರಕ್ಷಣೆಗಾಗಿ ಹೆಲ್ಮೆಟ್ ಧರಿಸಿಕೊಂಡೇ ನೌಕರರು ಕೆಲಸ ಮಾಡುತ್ತಾರೆ.

ಕೆಲದಿನಗಳ ಹಿಂದೆ ಮೇಲ್ಛಾವಣಿ ಕಳಚಿ ಬಿದ್ದು, ಅನೇಕ ನೌಕರರಿಗೆ ಗಾಯಗಳಾಗಿವೆ. ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳಿಗೂ ಹಾನಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...