alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ಸಿಗಲಿದೆ ‘ಶುಭ ಸುದ್ದಿ’

ನವದೆಹಲಿ: ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಮೂಲವೇತನದ 2.57 ಫಿಟ್ಮೆಂಟ್ ಗೆ ಅನುಗುಣವಾಗಿ ವೇತನವನ್ನು ಪಡೆಯುತ್ತಿದ್ದು, ಅವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಗಲಿದೆ.

ಮ್ಯಾಟ್ರಿಕ್ಸ್ ಲೆವೆಲ್ 1 -5 ರ ವರೆಗಿನ ಕೆಳಹಂತದ ಅಧಿಕಾರಿಗಳ ವೇತನವನ್ನು 7 ನೇ ವೇತನ ಆಯೋಗದ ಶಿಫಾರಿಸ್ಸಿನ ಆಚೆಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದ್ದು, ಸರ್ಕಾರದ ಈ ಚಿಂತನೆ ಕಾರ್ಯರೂಪಕ್ಕೆ ಬಂದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಏರಿಕೆಯಾಗಲಿದೆ.

7 ನೇ ವೇತನ ಆಯೋಗದ ಶಿಫಾರಸು ಬಳಿಕ, ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 2.57 ಫಿಟ್ಮೆಂಟ್ ಆಧರಿಸಿ, ಮಾಸಿಕವಾಗಿ 7000 ರೂ.ನಿಂದ 18,000 ರೂ.ವರೆಗೆ ಏರಿಕೆಯಾಗಿದೆ. 2016 ರ ಜನವರಿಯಿಂದ ಪೂರ್ವಾನ್ವಯವಾಗುವಂತೆ ವೇತನ ಪರಿಷ್ಕರಣೆ ಜಾರಿಗೆ ತರಲಾಗಿತ್ತು.

ಆದರೆ ನೌಕರರ ವಲಯದಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆಗ ಕೇಂದ್ರ ಹಣಕಾಸು ಖಾರತೆ ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದರು. ಅದರಂತೆ ಕೇಂದ್ರ ಸರ್ಕಾರ ಫಿಟ್ಮೆಂಟ್ ಪರಿಷ್ಕರಿಸಲಿದ್ದು, ವೇತನ ಏರಿಕೆಯ ಬಗ್ಗೆ ಏಪ್ರಿಲ್ ಒಳಗೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...