alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಗೊಂಡ ಹೆಣ್ಣಾನೆಗೆ ಶೂ ಭಾಗ್ಯ…

shoe

ತಮಿಳುನಾಡಿನ ಹೆಣ್ಣಾನೆಯೊಂದಕ್ಕೆ ಶೂ ಹಾಕಿಕೊಳ್ಳುವ ಭಾಗ್ಯ ಒದಗಿ ಬಂದಿದೆ. 57 ವರ್ಷದ, 2.7 ಟನ್ ತೂಕವಿರುವ ಹೆಣ್ಣಾನೆ ಲಕ್ಷ್ಮಿಯ ಪಾದಗಳಿಗೆ ತೀವ್ರ ಗಾಯವಾಗಿತ್ತು. ರಾಜಪಾಲಯಂನ ಅನಿಮಲ್ ಕೇರ್ ಟ್ರಸ್ಟ್ ಗೆ ಕರೆತಂದಾಗ ಆನೆಗೆ ನಡೆಯಲು ಸಾಧ್ಯವಾಗ್ತಿರಲಿಲ್ಲ. 300 ಮೀಟರ್ ದೂರ ಸಾಗಲು 15 ನಿಮಿಷಗಳೇ ಬೇಕಾಗುತ್ತಿತ್ತು. ಇಲ್ಲಿಗೆ ಕರೆತಂದಾಗ ಲಕ್ಷ್ಮಿಯ ತೂಕ 2.4 ಟನ್, ಪಶುವೈದ್ಯ ಪಿ.ರಾಮಚಂದ್ರನ್ ಅವರ ಆರೈಕೆಯಲ್ಲಿ ಚೇತರಿಸಿಕೊಂಡ ಹೆಣ್ಣಾನೆ 300 ಕೆಜಿ ತೂಕ ಹೆಚ್ಚಿಸಿಕೊಂಡಿದೆ. ಪ್ರತಿದಿನ ಪಾದದ ಗಾಯವನ್ನು ತೊಳೆದು ಔಷಧ ಹಾಕಿ ಆನೆಗೆ ಶೂ ಹಾಕಲಾಗುತ್ತದೆ. 8 ಗಂಟೆಗಳ ನಂತರ ಬೂಟನ್ನು ಬಿಚ್ಚಿ ಆನೆಗೆ ರಿಲ್ಯಾಕ್ಸ್ ಮಾಡಿಸಲಾಗುತ್ತದೆ.

ಇನ್ನು ಒಂದು ವರ್ಷ ಚಿಕಿತ್ಸೆ ಮುಂದುವರಿಸಿದ್ರೆ ಮಾತ್ರ ಆನೆ ಸಹಜವಾಗಿ ನಡೆಯಲು ಸಾಧ್ಯ ಎನ್ನುತ್ತಾರೆ ವೈದ್ಯರು. ಸದ್ಯ ಶೂ ಹಾಕಿಕೊಂಡು ಲಕ್ಷ್ಮಿ ನಡೆದಾಡುತ್ತಿದ್ದಾಳೆ. ಅನಿಮಲ್ ಕೇರ್ ಟ್ರಸ್ಟ್ ಸಂಸ್ಥಾಪಕ ಎಸ್.ಡಿ.ಸೆಲ್ವರಾಮ್ ರಾಜಾ ಆನೆಗೆ ಶೂ ಹಾಕುವ ಐಡಿಯಾ ಕೊಟ್ರು. ಒಂದು ತಿಂಗಳು ಕಷ್ಟಪಟ್ಟು ಆನೆ ಕಾಲಿಗೆ ಸರಿಹೊಂದುವಂತಹ ಬೂಟುಗಳನ್ನು ತಯಾರಿಸಲಾಗಿದೆ. ಗಟ್ಟಿಯಾದ ರಬ್ಬರ್ ನಿಂದ ಸೋಲ್ ಮಾಡಲಾಗಿದ್ದು, ನೈಲಾನ್ ರಬ್ಬರ್, ಬೆಲ್ಟ್ ಕುಶನ್, ಸಾಫ್ಟ್ ರಬ್ಬರ್ ಎಲ್ಲವನ್ನೂ ಬಳಸಲಾಗಿದೆ. ಗ್ರಿಪ್ ಸಿಗಲಿ ಅನ್ನೋ ಕಾರಣಕ್ಕೆ ಕ್ಯಾನ್ ವಾಸ್ ಹಾಕಲಾಗಿದೆ. ಆನೆಯ ಶೂ ಸುತ್ತಳತೆ 4.7 ಅಡಿಯಿದ್ದು, ಉದ್ದ 1.4 ಅಡಿಯಿದೆ, ಪ್ರತಿ ಶೂ ತಲಾ 5 ಕೆಜಿ ಭಾರವಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...