alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕ್ ಹೊಡೆದು ಸತ್ತ ಆನೆ-6 ಅಡಿ ಎತ್ತರದಲ್ಲಿತ್ತು ಹೈಟೆನ್ಷನ್ ವೈರ್

ಆನೆಯೊಂದು ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಒಡಿಶಾದಲ್ಲಿ ಗುರುವಾರ ಸಂಭವಿಸಿದೆ. ರಾತ್ರಿ ವೇಳೆ ಆನೆ ಮಯೂರ್‍ಭಂಜ್‍ನ ಸನ್ಸರಾಸ್ಪೋಸಿ ಗ್ರಾಮದಲ್ಲಿ ಹಾದು ಹೋಗುತ್ತಿದ್ದಾಗ 11 ಕಿ.ವಾ. ಸಾಮರ್ಥ್ಯದ ಎಲೆಕ್ಟ್ರಿಕ್ ವೈರ್ ತಗುಲಿ ಈ ದುರ್ಘಟನೆ ಸಂಭವಿಸಿದೆ.

ವಿದ್ಯುತ್ ಕಂಬದಿಂದ 6 ಅಡಿ ಎತ್ತರದಲ್ಲಷ್ಟೇ ವೈರ್ ನೇತಾಡುತ್ತಿದ್ದುದು ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದು ಅನೆ ಮಾತ್ರವಲ್ಲ, ಮನುಷ್ಯರಿಗೂ ತಾಗುವಷ್ಟು ಕೆಳಗೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಎರಡು ವಾರಗಳ ಹಿಂದೆ 7 ಆನೆಗಳು ಹೀಗೆ ವಿದ್ಯುತ್ ತಗುಲಿ ಸತ್ತಿರುವ ಬೆನ್ನಿಗೇ ಈ ಘಟನೆ ನಡೆದಿರುವುದು ಆತಂಕಕಾರಿ ಎಂದು ಸ್ಥಳೀಯರು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಆದೇಶಿಸಿದ್ದಾರೆ.

ದೇಶದಲ್ಲಿ 2009 ರಿಂದ 2017ರ ವರೆಗೆ ವಿದ್ಯುತ್ ಶಾಕ್, ಅಪಘಾತ, ವಿಷಪ್ರಾಶನ ಇತ್ಯಾದಿಯಿಂದಾಗಿ 655 ಆನೆಗಳು ಮೃತಪಟ್ಟಿವೆ ಎಂದು ಪರಿಸರ ಸಚಿವಾಲಯದ ಅಂಕಿ-ಅಂಶ ಹೇಳುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...