alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣೀರು ತರಿಸುತ್ತೆ ಮರಿಗಾಗಿ 11 ಗಂಟೆಗಳ ಕಾಲ ಮಣ್ಣು ಅಗೆದ ಆನೆ ಕಥೆ

ತಾಯಿಯ ಪ್ರೀತಿಯನ್ನು ಪ್ರಪಂಚದ ಯಾವ ವಸ್ತುವಿಗೂ ಹೋಲಿಸಲು ಸಾಧ್ಯವಿಲ್ಲ. ಮನುಷ್ಯನಿರಲಿ ಇಲ್ಲ ಪ್ರಾಣಿ. ತಮ್ಮ ಮಗುವನ್ನು ರಕ್ಷಿಸಲು ತಾಯಿಯಾದವಳು ಸದಾ ಸಿದ್ಧಳಿರ್ತಾಳೆ. ಎಂಥ ಸಂದರ್ಭದಲ್ಲಿಯೂ ಮಕ್ಕಳ ರಕ್ಷಣೆ, ಪ್ರೀತಿ, ಆರೈಕೆ ಬಗ್ಗೆಯೇ ಆಕೆ ಚಿಂತಿತಳಾಗಿರ್ತಾಳೆ. ಇದಕ್ಕೆ ಜಾರ್ಖಂಡ್ ನಲ್ಲಿ ನಡೆದ ಘಟನೆಯೊಂದು ಉತ್ತಮ ಉದಾಹರಣೆ.

ಜಾರ್ಖಂಡ್ ನ ಹಳ್ಳಿಯೊಂದರಲ್ಲಿ ಆನೆಯೊಂದರ ಅಳು ಕೇಳಿಸಿದೆ. ತಕ್ಷಣ ಗ್ರಾಮಸ್ಥರು ಅಲ್ಲಿಗೆ ಹೋಗಿದ್ದಾರೆ. ಈ ವೇಳೆ ರಸ್ತೆಯ ಬಳಿ ಆನೆ ಗುಂಡಿ ತೋಡುತ್ತಿರುವುದು ಕಂಡು ಬಂದಿದೆ. ಹತ್ತಿರ ಹೋಗಿ ನೋಡಿದಾಗ ಗ್ರಾಮಸ್ಥರ ಕಣ್ಣಲ್ಲಿ ನೀರು ಬಂದಿದೆ.

ವಾಸ್ತವವಾಗಿ, ತನ್ನ 11 ತಿಂಗಳ ಮರಿ ಜೊತೆ ಆನೆಯೊಂದು ಕಾಡಿಗೆ ಹೋಗ್ತಿತ್ತು. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ತೋಡಿದ್ದ ಗುಂಡಿಗೆ ಮರಿ ಬಿದ್ದಿದೆ. ಮರಿಯನ್ನು ರಕ್ಷಿಸಲು ಪಣತೊಟ್ಟ ಆನೆ ಅಲ್ಲಿಯೇ ಗುಂಡಿ ತೋಡಲು ಶುರುಮಾಡಿದೆ. ಗುಂಡಿ ತೋಡಿದ ಮಣ್ಣನ್ನು ಆನೆ ಮರಿ ಮೇಲೆ ಹಾಕಿ ಅದು ಮೇಲೆ ಬರುವಂತೆ ಮಾಡುವ ಪ್ರಯತ್ನ ನಡೆಸಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 11 ಗಂಟೆಗಳ ಕಾಲ ಆನೆ ಈ ಕೆಲಸ ಮಾಡಿದೆ. ಆದ್ರೆ ಮಣ್ಣನ್ನು ಅಗೆದು ಸುಸ್ತಾದ ಆನೆ ಅಳಲು ಶುರುಮಾಡಿದೆ. ಆನೆ ಅಳು ಕೇಳಿ ಸ್ಥಳೀಯರು ಅಲ್ಲಿಗೆ ಬಂದಿದ್ದಾರೆ.

ಮೊದಲು ಆನೆ ಏನು ಮಾಡ್ತಿದೆ ಎನ್ನುವ ವಿಷ್ಯ ಸ್ಥಳೀಯರಿಗೆ ತಿಳಿಯಲಿಲ್ಲ. ಆನೆ ಗುಂಡಿ ಬಳಿ ಬರಲು ಬಿಡಲಿಲ್ಲ. ನಂತ್ರ ಆನೆಗೆ ಆಹಾರದ ಆಸೆ ತೋರಿಸಿ ಆಕೆ ಗಮನ ಬೇರೆಡೆ ಸೆಳೆದು ಗ್ರಾಮಸ್ಥರು ಗುಂಡಿಗೆ ಬಿದ್ದಿದ್ದ ಮರಿಯನ್ನು ರಕ್ಷಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...