alex Certify
ಕನ್ನಡ ದುನಿಯಾ       Mobile App
       

Kannada Duniya

ಆಹಾರ ಹುಡುಕಿಕೊಂಡು ಆನೆಗಳು ಬಂದಿದ್ದೆಲ್ಲಿಗೆ ಗೊತ್ತಾ?

ತಮಿಳುನಾಡಿನ ಕೊಯಂಬತ್ತೂರಿನ ಮನೆಯೊಂದಕ್ಕೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಿದೆ. ಎರಡು ಆನೆಗಳು ಆಹಾರ ಹುಡುಕಿಕೊಂಡು ಮನೆಯೊಳಕ್ಕೆ ಬಂದಿವೆ. ಹಸಿದಿದ್ದ ಒಂದು ದೊಡ್ಡ ಆನೆ ಹಾಗೂ ಒಂದು ಮರಿಯಾನೆ ನೇರವಾಗಿ ಮನೆಯೊಂದಕ್ಕೆ ಎಂಟ್ರಿ ಕೊಟ್ಟಿದ್ದವು.

ಆನೆಗಳನ್ನು ನೋಡಿ ಮನೆಯವರಿಗೆಲ್ಲ ಗಾಬರಿ. ಮನೆಯ ತುಂಬೆಲ್ಲಾ ಓಡಾಡಿದ ಆನೆಗಳು ತಿನ್ನಲು ಏನಾದ್ರೂ ಸಿಗಬಹುದೆಂದು ಹುಡುಕಾಡಿವೆ. ಆದ್ರೆ ಏನೂ ಸಿಕ್ಕಿಲ್ಲ. ಹಾಗಂತ ಮನೆ ತುಂಬಾ ದಾಂಧಲೆ ಮಾಡಿರಬೇಕು ಅಂದುಕೊಳ್ಬೇಡಿ. ಯಾರಿಗೂ ತೊಂದರೆ ಕೊಡದೆ ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಹೊರಟು ಹೋಗಿವೆ.

ನವೆಂಬರ್ 30 ರಂದು ರಾತ್ರಿ ಸುಮಾರು 9.54ರ ವೇಳೆಗೆ ಈ ಘಟನೆ ನಡೆದಿದೆ. ಆನೆ ಮತ್ತು ಮರಿಯಾನೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲೂ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ನೋಡಿ ಪ್ರಾಣಿಗಳಿಂದ ಕಳ್ಳರು, ದುಷ್ಕರ್ಮಿಗಳು ಪಾಠ ಕಲಿಯಬೇಕೆಂದು ಹಲವರು ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...