alex Certify
ಕನ್ನಡ ದುನಿಯಾ       Mobile App
       

Kannada Duniya

ಸುರಂಗದಲ್ಲಿ ನಿಂತು ಹೋಯ್ತು ಮೆಟ್ರೋ ರೈಲು…!

ಕೋಲ್ಕತ್ತಾದಲ್ಲಿ ಮೆಟ್ರೋ ರೈಲಿನ ಸುರಂಗ ಮಾರ್ಗದಲ್ಲಿ ವಿದ್ಯುತ್ ಅಡಚಣೆ ಕೆಲ ಕಾಲ ಪ್ರಯಾಣಿಕರನ್ನು ಭಯಭೀತರನ್ನಾಗಿಸಿತ್ತು. ಭಾನುವಾರ ಸಂಜೆ ಕೋಲ್ಕತ್ತಾದ ಕವಿ ಸುಭಾಸ್ ಸ್ಟೇಷನ್ ನಿಂದ ಹೊರಟ ರೈಲು ನೇತಾಜಿ ಸ್ಟೇಷನ್ ಗೆ ತೆರಳುವ ಮಾರ್ಗ ಮಧ್ಯದ ಸುರಂಗದಲ್ಲಿ ಈ ಘಟನೆ ನಡೆದಿದೆ.

ಪ್ರತ್ಯಕ್ಷರ್ಶಿಗಳ ಪ್ರಕಾರ, ರೈಲು ಹೊರಡುವಾಗಲೇ ಕೆಲ ಪ್ರಯಾಣಿಕರು ಕಿಡಿ ಹೊತ್ತಿಕೊಂಡಿದ್ದನ್ನು ನೋಡಿದ್ದರು. ಈ ಬಗ್ಗೆ ಅಲಾರಾಂ ಬಾರಿಸಿ ಮೇಲಧಿಕಾರಿಗಳಿಗೆ ಹೇಳಿದ್ದರೂ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅದಾದ ಕೆಲ ಹೊತ್ತಿಗೇ ಸುರಂಗದಲ್ಲಿ ಮೆಟ್ರೋ ನಿಂತು ಹೋಗಿತ್ತು. ತತ್ ಕ್ಷಣ ರೈಲಿನಲ್ಲಿ ಗಲಾಟೆ ಗದ್ದಲ ಉಂಟಾಗಿತ್ತು. ಕೊನೆಗೆ ರೈಲಿನಲ್ಲಿದ್ದವರು ಕಿಟಕಿಯ ಗ್ಲಾಸ್ ಗಳನ್ನು ಒಡೆದು ಹೊರಬಂದಿದ್ದಾರೆ.

ಈ ಘಟನೆಯಿಂದಾಗಿ ಅರ್ಧ ಗಂಟೆ ಮೆಟ್ರೋ ಸಂಚಾರ ವಿಳಂಬವಾಗಿತ್ತು. ಘಟನೆಯ ಬಗ್ಗೆ ಸಂಬಂಧಪಟ್ಟವರು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...