alex Certify
ಕನ್ನಡ ದುನಿಯಾ       Mobile App
       

Kannada Duniya

ಅತಂತ್ರ ಫಲಿತಾಂಶ ಬಂದ್ರೆ ದೆಹಲಿಯಲ್ಲೇ ಡೀಲ್…?

ಇಡೀ ದೇಶದ ಗಮನಸೆಳೆದಿರುವ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಇದೇ ವೇಳೆ ರಾಜ್ಯ ಬಿ.ಜೆ.ಪಿ. ನಾಯಕರಿಗೆ ಪಕ್ಷದ ವರಿಷ್ಠರಿಂದ ಖಡಕ್ ಸೂಚನೆ ನೀಡಲಾಗಿದೆ.

ಯಾವುದೇ ಕಾರಣಕ್ಕೂ ಮೈತ್ರಿ ವಿಚಾರವಾಗಿ ಯಾವ ನಾಯಕರೂ ಕೂಡ ಹೇಳಿಕೆ ನೀಡಬಾರದೆಂದು ವರಿಷ್ಠರು ಸೂಚಿಸಿದ್ದಾರೆ. ಅತಂತ್ರ ಫಲಿತಾಂಶದ ಬಗ್ಗೆ ಸಮೀಕ್ಷೆಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ವರಿಷ್ಠರು ಮೈತ್ರಿ ಬಗ್ಗೆ ಹೇಳಿಕೆಗಳನ್ನು ನೀಡದಂತೆ ತಿಳಿಸಿದ್ದಾರೆ.

ಕೆಲವು ಸಮೀಕ್ಷೆಗಳಲ್ಲಿ ಬಿ.ಜೆ.ಪಿ., ಮತ್ತೆ ಕೆಲ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿವೆ. ಈ ಪಕ್ಷಗಳಿಗೆ ಬಹುಮತ ಸಿಗಲಿದೆ ಎಂದು ಹೇಳಲಾಗ್ತಿದೆ. ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ, ದೆಹಲಿಯಲ್ಲಿಯೇ ಬಿ.ಜೆ.ಪಿ. ನಾಯಕರು ಮೈತ್ರಿಯ ಬಗ್ಗೆ ವೇದಿಕೆ ಸಿದ್ಧಪಡಿಸಲಿದ್ದಾರೆ. ಇಲ್ಲವೇ ಬಹುಮತಕ್ಕೆ ಕೆಲವೇ ಸ್ಥಾನಗಳು ಅಗತ್ಯವಾದಲ್ಲಿ ಗೋವಾ ಮಾದರಿ ಸರ್ಕಾರವನ್ನು ರಚಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ಜೆ.ಡಿ.ಎಸ್. ಕಿಂಗ್ ಮೇಕರ್ ಆಗಲಿದೆ ಎನ್ನುವುದು ಬಹುತೇಕ ಸಮೀಕ್ಷೆಗಳ ಅಭಿಪ್ರಾಯವಾಗಿದೆ. ಈ ಕಾರಣದಿಂದ ಬಿ.ಜೆ.ಪಿ. ವರಿಷ್ಠರು, ರಾಜ್ಯ ನಾಯಕರಿಗೆ ಮೈತ್ರಿಯ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದು, ಅಗತ್ಯವಾದಲ್ಲಿ ಕೇಂದ್ರ ನಾಯಕರೇ ಮಾತುಕತೆಗೆ ಮುಂದಾಗಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...