alex Certify
ಕನ್ನಡ ದುನಿಯಾ       Mobile App
       

Kannada Duniya

ಆಮ್ ಆದ್ಮಿಗೆ ಚಾಟಿ ಬೀಸಿದ ಚುನಾವಣಾ ಆಯೋಗ

ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗೆ ಕೇಂದ್ರ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದೆ. ಆಮ್ ಆದ್ಮಿ ಪಕ್ಷ ದೇಣಿಗೆ ರೂಪದಲ್ಲಿ ಪಡೆದಿರುವ ಹಣದ ಮೂಲದ ಬಗ್ಗೆ ಮಾಹಿತಿ ನೀಡುವಂತೆ ಚುನಾವಣಾ ಆಯೋಗ ನೊಟೀಸ್ ನೋಡಿದೆ. ಹವಾಲಾ ಹಣದ ವಹಿವಾಟು ನಡೆದಿರುವ ಬಗ್ಗೆ ಮಾಹಿತಿ ಇದ್ದು, 20 ದಿನಗಳ ಒಳಗೆ ಅದಕ್ಕೆ ಉತ್ತರ ನೀಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಒಂದು ವೇಳೆ ನಿಗದಿತ ಕಾಲಾವಕಾಶದ ಒಳಗೆ ಮಾಹಿತಿ ನೀಡುವಲ್ಲಿ ವಿಫಲವಾದ ಪಕ್ಷದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸೂಚನೆಯನ್ನ ಚುನಾಣಾ ಆಯೋಗ ನೀಡಿದ್ದು, ಪಕ್ಷದ ಮಾನ್ಯತೆ ರದ್ದಾಗಬಹುದು ಅಂತ ಸೂಚನೆ ನೀಡಲಾಗಿದೆ. 2014-15ರ ಹಣಕಾಸು ವರ್ಷದಲ್ಲಿ ಆಮ್ ಆದ್ಮಿ ಪಕ್ಷ ಸಲ್ಲಿಸಿರುವ ಆದಾಯ ತೆರಿಗೆ ವಿವರದ ನಿಷ್ಠೆಯನ್ನೇ ಈಗ ಚುನಾವಣಾ ಆಯೋಗ ಪ್ರಶ್ನೆ ಮಾಡಿದೆ.

ಚುನಾವಣಾ ಆಯೋಗ ನೀಡಿರುವ ನೊಟೀಸ್ ನಲ್ಲಿ ಹವಾಲಾ ಆಪರೇಟರ್ ನಿಂದ 2 ಕೋಟಿ ಪಡೆದಿರೋದಾಗಿ ಚುನಾವಣಾ ಆಯೋಗ ತಿಳಿಸಿದೆ. ಅಷ್ಟೇ ಅಲ್ಲ ಪಕ್ಷದ ದೇಣಿಗೆಯಾಗಿ ಸಂಗ್ರಹಿಸಿರುವ 13 ಕೋಟಿ 16 ಲಕ್ಷ ರೂಪಾಯಿಗಳಿಗೆ ಯಾವುದೇ ದಾಖಲೆ ನೀಡಿಲ್ಲ ಅಂತ ಆಯೋಗ ಪ್ರಶ್ನೆ ಮಾಡಿದೆ. 2015ರಲ್ಲಿ ಆಪ್ ವಿದೇಶದ ಆರ್ಥಿಕ ನಿಧಿಯನ್ನ ದುರುಪಯೋಗಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದ ಪ್ರಕರಣಗಳಿಂದ ಕ್ಲೀನ್ ಚಿಟ್ ನೀಡಲಾಗಿತ್ತು. ಆದ್ರೆ ಆದಾಯ ತೆರಿಗೆ ಇಲಾಖೆ ದೇಣಿಗೆಯ ನಿಯಮ ಉಲ್ಲಂಘನೆ ಪ್ರಕರಣವನ್ನ ದಾಖಲಿಸಿತ್ತು.

2014-15ರ ಅವಧಿಯಲ್ಲಿ 2696 ಜನರಿಂದ ದೇಣಿಗೆ ರೂಪದಲ್ಲಿ ಆಪ್ ಪಕ್ಷ 37 ಶತಕೋಟಿ ರೂಪಾಯಿ ಸಂಗ್ರಹವಾಗಿದೆ ಅಂತ ಆದಾಯದ ವಿವರ ಸಲ್ಲಿಸಲಾಗಿತ್ತು. ಆನಂತರದಲ್ಲಿ ಮತ್ತೊಮ್ಮೆ 8264 ಜನರಿಂದ 37 ಶತಕೋಟಿ ದೇಣಿಗೆ ಸಂಗ್ರಹವಾಗಿದೆ ಅಂತ ಮತ್ತೊಂದು ಆದಾಯದ ವಿವರ ಸಲ್ಲಿಸಲಾಗಿತ್ತು. ಹಾಗಾಗಿಯೇ ಚುನಾವಣಾ ಆಯೋಗ ಆಪ್ ಪಕ್ಷಕ್ಕೆ ನೊಟೀಸ್ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...