alex Certify
ಕನ್ನಡ ದುನಿಯಾ       Mobile App
       

Kannada Duniya

ಮತದಾರರ ನೋಂದಣಿಗಾಗಿ ಫೇಸ್ಬುಕ್ ಜೊತೆ ಕೈಜೋಡಿಸಿದ ಆಯೋಗ

ಮತದಾರರ ನೋಂದಣಿ ಅಭಿಯಾನಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಫೇಸ್ಬುಕ್ ಜೊತೆಗೆ ಕೈಜೋಡಿಸಿದೆ. ಮೊದಲ ಬಾರಿ ಮತದಾನದ ಹಕ್ಕು ಪಡೆದುಕೊಂಡುವವರಿಗೆಲ್ಲ ಫೇಸ್ಬುಕ್ ಮೂಲಕ ರಿಮೈಂಡರ್ ಕಳಿಸಲಾಗುತ್ತದೆ.

ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಸುವಂತೆ ಸೂಚಿಸಲಾಗುತ್ತದೆ. ನವೆಂಬರ್ 18ರಿಂದ ಡಿಸೆಂಬರ್ 31ರೊಳಗೆ 18ನೇ ವರ್ಷಕ್ಕೆ ಕಾಲಿಟ್ಟವರಿಗೆಲ್ಲ ಫೇಸ್ಬುಕ್ ನಲ್ಲಿ ನ್ಯೂಸ್ ಫೀಡ್ ಮೂಲಕ ರಿಮೈಂಡರ್ ಕಳಿಸಲಾಗುತ್ತದೆ.

ಇಂಗ್ಲಿಷ್, ಹಿಂದಿ, ಕನ್ನಡ, ಪಂಜಾಬಿ, ಬಂಗಾಳಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಉರ್ದು, ಅಸ್ಸಾಮಿ, ಮರಾಠಿ ಮತ್ತು ಓರಿಯಾ ಸೇರಿ 13 ಭಾಷೆಗಳಲ್ಲಿ ರಿಮೈಂಡರ್ ಕಳಿಸಲಾಗುತ್ತದೆ. ರಿಜಿಸ್ಟರ್ ನೌ ಅನ್ನೋ ಆಪ್ಷನ್ ಕೂಡ ಅಲ್ಲಿರುತ್ತದೆ.

ನ್ಯಾಶನಲ್ ವೋಟರ್ಸ್ ಸರ್ವೀಸಸ್ ಪೋರ್ಟಲ್ ಮುಂದಿನ ರಿಜಿಸ್ಟ್ರೇಶನ್ ಪ್ರೋಸೆಸ್ ಗೆ ನಿಮ್ಮನ್ನು ಗೈಡ್ ಮಾಡುತ್ತದೆ. ಫೇಸ್ಬುಕ್ ಮೂಲಕ ಜನರನ್ನು ತಲುಪುವುದು ಅತ್ಯಂತ ಸುಲಭವಾಗಿರೋದ್ರಿಂದ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...