alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಯ್ಡ್ ನ್ಯೂಸ್ ಪ್ರಕರಣದಲ್ಲಿ ಅನರ್ಹಗೊಂಡ ಸಚಿವ

narottam_story_647_062417115340ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಪ್ರಕರಣದಲ್ಲಿ ಮಧ್ಯ ಪ್ರದೇಶದ ಸಚಿವರೊಬ್ಬರನ್ನು ಕೇಂದ್ರ ಚುನಾವಣಾ ಆಯೋಗ ಅನರ್ಹಗೊಳಿಸಿದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ರ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರೆಂದೇ ಪರಿಗಣಿಸಲಾಗಿರುವ ನರೋತ್ತಮ್ ಮಿಶ್ರಾ ಅನರ್ಹಗೊಂಡವರಾಗಿದ್ದು, ಇವರು ಸಾರ್ವಜನಿಕ ಸಂಪರ್ಕಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಜೇಂದ್ರ ಭಾರತಿ ಎಂಬವರು 2012 ರಲ್ಲಿ ನರೋತ್ತಮ್ ಮಿಶ್ರಾ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, 2008 ರ ಚುನಾವಣೆ ಸಂದರ್ಭದಲ್ಲಿ ತಮ್ಮ ಪರ ಸುದ್ದಿ ಬರೆಸಿಕೊಳ್ಳಲು ನರೋತ್ತಮ್ ಮಿಶ್ರಾ ಹಣ ಪಾವತಿಸಿದ್ದಾರೆ. ಇದರ ಲೆಕ್ಕವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲವೆಂದು ಆರೋಪಿಸಿದ್ದರು.

ಈ ಕುರಿತು ತನಿಖೆಗೆ ಚುನಾವಣಾ ಆಯೋಗ ಮುಂದಾದಾಗ ಇದಕ್ಕೆ ತಡೆ ಕೋರಿ ನರೋತ್ತಮ್ ಮಿಶ್ರಾ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...