alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ

election-commission-3

ನಿರೀಕ್ಷೆಯಂತೆ ಇಂದು ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟವಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯುಕ್ತ ನಾಸಿರ್ ಜೈನ್ ಸುದ್ದಿಗೋಷ್ಠಿ ನಡೆಸಿ ದಿನಾಂಕ ಪ್ರಕಟಿಸಿದ್ದಾರೆ.

ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಹಾಗೂ ಮಣಿಪುರದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಗೋವಾ ಹಾಗೂ ಪಂಜಾಬ್ ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ಫೆಬ್ರವರಿ 4ರಂದು ಮತದಾನ ನಡೆಯಲಿದೆ. ಉತ್ತರಾಖಂಡ್ ದಲ್ಲಿಯೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 15 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಮಾರ್ಚ್ 4ರಂದು ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ ಮಾರ್ಚ್ 8ರಂದು ನಡೆಯಲಿದೆ.

ಇನ್ನು ಉತ್ತರ ಪ್ರದೇಶದಲ್ಲಿ 7 ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 11ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಎರಡನೇ ಹಂತದ ಮತದಾನ ಫೆಬ್ರವರಿ 15ರಂದು ನಡೆಯಲಿದೆ. ಮೂರನೇ ಹಂತದ ಮತದಾನ ಫೆಬ್ರವರಿ 19ರಂದು ಮತದಾನ ನಡೆಯಲಿದೆ. ನಾಲ್ಕನೇ ಹಂತದ ಮತದಾನ ಫೆಬ್ರವರಿ 23ರಂದು ನಡೆಯಲಿದೆ. ಐದನೇ ಹಂತದ ಮತದಾನ ಫೆಬ್ರವರಿ 27 ಹಾಗೂ 6ನೇ ಹಂತದ ಮತದಾನ ಮಾರ್ಚ್ ನಾಲ್ಕರಂದು ಹಾಗೂ 7ನೇ ಹಂತದ ಮತದಾನ ಮಾರ್ಚ್ 8ರಂದು ನಡೆಯಲಿದೆ.

ಐದೂ ರಾಜ್ಯಗಳ ಮತ ಎಣಿಕೆ ಒಂದೇ ದಿನ ನಡೆಯಲಿದೆ. ಮಾರ್ಚ್ 11ರಂದು ಐದು ರಾಜ್ಯಗಳ ಫಲಿತಾಂಶ ಹೊರಬೀಳಲಿದೆ.

5 ರಾಜ್ಯದಲ್ಲಿ ಒಟ್ಟು 16 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ.690 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಮತಗಟ್ಟೆ ನಿರ್ಮಾಣಕ್ಕೆ ಚುನಾವಣಾ ಆಯೋಗ ಮುಂದಾಗಿದೆ. ಗೋವಾ, ಪಂಜಾಬ್ ನಲ್ಲಿ ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಶುರುವಾಗಲಿದೆ. ಉತ್ತರಾಖಂಡ್ ದಲ್ಲಿ ಜ.10ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಮಣಿಪುರ, ಉತ್ತರ ಪ್ರದೇಶದಲ್ಲಿ ಜ.12ರಿಂದ ನಾಮಪತ್ರ ಸಲ್ಲಿಕೆ ನಡೆಯಲಿದೆ.  3 ರಾಜ್ಯಗಳಲ್ಲಿ ಒಬ್ಬ ಅಭ್ಯರ್ಥಿಗೆ 28 ಲಕ್ಷ ಚುನಾವಣಾ ವೆಚ್ಚ ನಿಗದಿ ಮಾಡಲಾಗಿದೆ. ಉಳಿದ ಎರಡು ರಾಜ್ಯಗಳಿಗೆ 20 ಲಕ್ಷ ನಿಗದಿ ಮಾಡಲಾಗಿದೆ.

ಚುನಾವಣಾ ದಿನಾಂಕ ಪ್ರಕಟ

ಗೋವಾ : 40 ವಿಧಾನಸಭಾ ಕ್ಷೇತ್ರ : ಫೆಬ್ರವರಿ 4

ಪಂಜಾಬ್ : 117 ವಿಧಾನಸಭಾ ಕ್ಷೇತ್ರ : ಫೆಬ್ರವರಿ 4

ಉತ್ತರಾಖಂಡ್ : 70 ವಿಧಾನಸಭಾ ಕ್ಷೇತ್ರ : ಫೆಬ್ರವರಿ 15

ಮಣಿಪುರ : 60 ವಿಧಾನ ಸಭಾ ಕ್ಷೇತ್ರ : ಮೊದಲ ಹಂತದ ಮತದಾನ ಮಾರ್ಚ್ 4, 2ನೇ ಹಂತದ ಮತದಾನ ಮಾರ್ಚ್ 8

ಉತ್ತರ ಪ್ರದೇಶ :

ಮೊದಲ ಹಂತದ ಮತದಾನ : ಫೆಬ್ರವರಿ 11

ಎರಡನೇ ಹಂತದ ಮತದಾನ : ಫೆಬ್ರವರಿ 15

3ನೇ ಹಂತದ ಮತದಾನ : ಫೆಬ್ರವರಿ 19

ನಾಲ್ಕನೇ ಹಂತದ ಮತದಾನ : ಫೆಬ್ರವರಿ 23

ಐದನೇ ಹಂತದ ಮತದಾನ :  ಫೆಬ್ರವರಿ 27

6ನೇ ಹಂತದ ಮತದಾನ : ಮಾರ್ಚ್ 4

7ನೇ ಹಂತದ ಮತದಾನ: ಮಾರ್ಚ್ 8

ಐದೂ ರಾಜ್ಯಗಳ ಚುನಾವಣಾ ಫಲಿತಾಂಶ : ಮಾರ್ಚ್ 11

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...