alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ ಜಾಹೀರಾತಿನಲ್ಲಿ ‘ಪಪ್ಪು’ ಪದ ಬಳಕೆಗೆ ನಿರ್ಬಂಧ

ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆಯ ಅಖಾಡ ರಂಗೇರುತ್ತಿದೆ. ಆಡಳಿತಾರೂಢ ಬಿಜೆಪಿ ತನ್ನ ಚುನಾವಣಾ ಜಾಹೀರಾತುಗಳಲ್ಲಿ ಯಾವುದೇ ಕಾರಣಕ್ಕೂ ಪಪ್ಪು ಎಂಬ ಪದ ಬಳಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಸಾಮಾಜಿಕ ತಾಣಗಳಲ್ಲಿ ತಮಾಷೆ ಮಾಡಲಾಗುತ್ತಿದೆ. ಈ ಮೂಲಕ ಬಿಜೆಪಿ ಅವಹೇಳನಕಾರಿ ಪದ ಬಳಸಿದೆ ಅಂತಾ ಕಾಂಗ್ರೆಸ್ ಆರೋಪಿಸಿತ್ತು. ಆದ್ರೆ ಯಾವುದೇ ಜಾಹೀರಾತಿನಲ್ಲೂ ಆ ರೀತಿಯ ಅರ್ಥ ಬರುವ ಪದ ಬಳಸಿಲ್ಲ ಅಂತಾ ಬಿಜೆಪಿ ಸಮರ್ಥಿಸಿಕೊಂಡಿದೆ.

ಆದ್ರೆ ಪಪ್ಪು ಎಂಬ ಪದ ಅವಹೇಳನಕಾರಿ ಎಂಬ ಚುನಾವಣಾ ಆಯೋಗದ ವಾದ ತಪ್ಪು ಅಂತಾನೂ ಹೇಳಿದೆ. ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಪಪ್ಪು ಎಂಬ ಪದವನ್ನು ತೆಗೆದುಹಾಕಿ ಚುನಾವಣಾ ಪ್ರಚಾರ ಜಾಹೀರಾತಿನ ಹೊಸ ಸ್ಕ್ರಿಪ್ಟ್ ಅನ್ನು ಸಲ್ಲಿಸಲು ಕೇಸರಿ ಪಕ್ಷ ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...