alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿಗೆ ದಂಡ ವಿಧಿಸಿ ವಿಚಿತ್ರ ತೀರ್ಪು ನೀಡಿದ ಗ್ರಾಮಸ್ಥರು

ತೆಲಂಗಾಣದ ಗ್ರಾಮವೊಂದರಲ್ಲಿ ಅತ್ಯಾಚಾರಿ ಆರೋಪಿಗೆ ದಂಡ ವಿಧಿಸಿ ಬಿಡುಗಡೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ವಿಚಾರಣೆ ನಡೆಸಿದ ಗ್ರಾಮದ ಮುಖ್ಯಸ್ಥನೊಬ್ಬ ಆರೋಪಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಿ ಪ್ರಕರಣ ಇತ್ಯರ್ಥ ಮಾಡಿದ್ದಾನೆ.

ಆರೋಪಿ ಮದುವೆ ಆಸೆ ತೋರಿಸಿ ಅತ್ಯಾಚಾರವೆಸಗುತ್ತಿದ್ದನಂತೆ. ಮೆಹಬೂಬ್ ನಗರದ ನಾರಾಯಣಪೇಟ್ ದಲ್ಲಿ ಘಟನೆ ನಡೆದಿದೆ. ಅಪ್ರಾಪ್ತೆ ಗರ್ಭಿಣಿಯಾಗ್ತಿದ್ದಂತೆ ವಿಷ್ಯ ಬಹಿರಂಗವಾಗಿದೆ. ಪೊಲೀಸರು ಆರೋಪಿ ಹಾಗೂ ತೀರ್ಪು ನೀಡಿದ ನಾಲ್ವರನ್ನು ಬಂಧಿಸಿದ್ದಾರೆ.

17 ವರ್ಷದ ಹುಡುಗಿ ತಂದೆ-ತಾಯಿ ಜೊತೆ ತೋಟದಲ್ಲಿ ಕೆಲಸ ಮಾಡ್ತಿದ್ದಳು ಎನ್ನಲಾಗಿದೆ. ತೋಟದ ಮಾಲೀಕ ಆಕೆ ಜೊತೆ ಸಂಬಂಧ ಬೆಳೆಸಿದ್ದಾನೆ. ಹುಡುಗಿಯಲ್ಲಾಗ್ತಿದ್ದ ಬದಲಾವಣೆ ಗಮನಿಸಿ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆಗ ಹುಡುಗಿ ಗರ್ಭಿಣಿ ಎಂಬ ಸಂಗತಿ ಗೊತ್ತಾಗಿದೆ. ಹುಡುಗಿ ತಂದೆ-ತಾಯಿ ಬಾಯಿ ಮುಚ್ಚಿಸಲು ಹಣ ನೀಡಿದ್ದಾನೆ ಆರೋಪಿ. ಆದ್ರೆ ವಿಷ್ಯ ಪೊಲೀಸ್ ಕಿವಿಗೆ ಬಿದ್ದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...