alex Certify
ಕನ್ನಡ ದುನಿಯಾ       Mobile App
       

Kannada Duniya

ಸೇತುವೆಯಿಂದ ಬಸ್ ಬಿದ್ದು 9 ಮಂದಿ ಸಾವು

bus-andra

ವಿಜಯವಾಡ: ಆಂಧ್ರಪ್ರದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ 9 ಮಂದಿ ಸಾವು ಕಂಡಿದ್ದು, 40 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಕೃಷ್ಣಾ ಜಿಲ್ಲೆಯ ಪೆನುಗಂಚಿಪೊರ್ಲು ಮಂಡಲದ ಮುಲ್ಲಪಾಡು ಸಮೀಪ, ಸೇತುವೆಯಿಂದ ಬಸ್ ನದಿಗೆ ಉರುಳಿ ಬಿದ್ದಿದೆ. ಸ್ಥಳದಲ್ಲೇ ಹಲವರು ಸಾವು ಕಂಡಿದ್ದು, ಮತ್ತೆ ಕೆಲವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗಾಯಾಳುಗಳನ್ನು ವಿಜಯವಾಡ, ನಂದಿಗಾಮದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಗಾಯಾಳುಗಳಲ್ಲಿ 17 ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ದಿವಾಕರ್ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್ ವೈಜಾಗ್ ನಿಂದ ಹೈದರಾಬಾದ್ ಗೆ ತೆರಳುವಾಗ, ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ 30 ಅಡಿ ಕೆಳಕ್ಕೆ ಉರುಳಿ ಬಿದ್ದಿದೆ.

2 ಸಮನಾಂತರ ಸೇತುವೆಗಳ ನಡುವೆ ಬಸ್ ಬಿದ್ದಿದ್ದು, ಬಿದ್ದ ರಭಸಕ್ಕೆ ಬಸ್ ಜಖಂಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...