alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮನಾಭ ಸ್ವಾಮಿ ದೇವಾಲಯದಲ್ಲಿ 8 ವಜ್ರಗಳು ನಾಪತ್ತೆ

temple

ಕೇರಳದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯದಲ್ಲಿದ್ದ ಅತ್ಯಂತ ಪ್ರಾಚೀನವಾದ 8 ವಜ್ರಗಳು ಕಾಣೆಯಾಗಿವೆ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ದೇವರ ವಿಗ್ರಹಕ್ಕೆ ತೊಡಿಸಲಾಗಿದ್ದ ವಜ್ರಗಳನ್ನು ಯಾರೋ ಕಳವು ಮಾಡಿದ್ದು, ಈ ಬಗ್ಗೆ ಕೇರಳ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅನಂತ ಪದ್ಮನಾಭ ದೇವಾಲಯ ಜಗತ್ತಿನ ಅತ್ಯಂತ ಶ್ರೀಮಂತ ಹಿಂದು ದೇವಸ್ಥಾನ ಎನಿಸಿಕೊಂಡಿದ್ದು, ಇದರ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂಪಾಯಿ. 10 ತಿಂಗಳುಗಳ ಹಿಂದೆ ಈ ದೇವಾಲಯದಲ್ಲಿದ್ದ 189 ಕೋಟಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು.

ಈಗ ಕಳವಾಗಿರುವ ವಜ್ರಗಳ ಮೌಲ್ಯ 21 ಲಕ್ಷ ಅಂತಾ ಹೇಳಲಾಗ್ತಿದೆ. ಆದ್ರೆ ಪುರಾತನ ವಜ್ರಗಳಾಗಿದ್ದರಿಂದ ಅವುಗಳ ಮೌಲ್ಯ ಇನ್ನೂ ಅಧಿಕ ಅಂತಾ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಬಗ್ಗೆ ಮೊದಲಿನಿಂದ್ಲೂ ಆರೋಪವಿದ್ದು, 2009ರಲ್ಲೇ ದೇವಾಲಯದ ಆಸ್ತಿಯನ್ನು ಸರಿಯಾಗಿ ನಿರ್ವಹಣೆ ಮಾಡದ ಬಗ್ಗೆ ದೂರು ದಾಖಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...