alex Certify
ಕನ್ನಡ ದುನಿಯಾ       Mobile App
       

Kannada Duniya

ಈದ್ ಮುಬಾರಕ್: ದೇಶದಾದ್ಯಂತ ಸಂಭ್ರಮ

ದೇಶದಾದ್ಯಂತ ಈದ್ ಉಲ್ ಫಿತರನ್ನು ಶನಿವಾರ ಆಚರಿಸಲಾಗ್ತಿದೆ. ಮುಸ್ಲಿಂ ಬಾಂಧವರು ಬೆಳಿಗ್ಗೆ ಈದ್ ಪ್ರಾರ್ಥನೆ ಮುಗಿಸಿದ್ದಾರೆ. ದೆಹಲಿ, ಬೆಂಗಳೂರು, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ ನಮಾಜ್ ಮುಗಿಸಿ ಮುಸ್ಲಿಂ ಬಾಂಧವರು ಪರಸ್ಪರ ಶುಭ ಕೋರಿಕೊಳ್ತಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರವಾಸಿಗಳಿಗೆ ಶುಭಕೋರಿದ್ದಾರೆ. ಪರಸ್ಪರ ಸೋದರತ್ವ ಹಾಗೂ ಸಾಮರಸ್ಯ ಹೆಚ್ಚಾಗಲಿ ಎಂದು ಆಶಿಸಿದ್ದಾರೆ.

ಜಾಮಾ ಮಸೀದಿ ಶಾಹಿ ಇಮಾಮ್ ಬುಕಾರಿ ಶುಕ್ರವಾರ ಸಂಜೆ ಶನಿವಾರ ಈದ್ ಆಚರಣೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು. ಈ ಘೋಷಣೆ ನಂತ್ರ ದೇಶದಾದ್ಯಂತ ಸಂಭ್ರಮ ಮನೆ ಮಾಡಿತ್ತು. ಮಾರುಕಟ್ಟೆಯಲ್ಲಿ ಜನಜಂಗುಳಿ ಕಾಣಿಸ್ತು. ಎಲ್ಲ ಮಸೀದಿಗಳಲ್ಲಿ  ಬೆಳಿಗ್ಗೆ 9 ಗಂಟೆ ಸುಮಾರಿಗೆ ಸಾಮೂಹಿಕ ಪ್ರಾರ್ಥನೆ ನಡೆದಿದೆ. ಈದ್ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...