alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಿ ಎಫೆಕ್ಟ್: ಮಾಂಸದ ಬದಲು ಟೀ ಮಾರಾಟ

default

ಉತ್ತರ ಪ್ರದೇಶ ಸರ್ಕಾರ ಅಕ್ರಮವಾಗಿ ನಡೆಯುತ್ತಿರುವ ಮಾಂಸದಂಗಡಿಗಳನ್ನು ಮುಚ್ಚುವಂತೆ ಪ್ರತಿ ಜಿಲ್ಲೆಗೂ ಆದೇಶ ಹೊರಡಿಸಿದೆ. ಆದೇಶದ ನಂತ್ರ ಆಯಾ ಜಿಲ್ಲಾಧಿಕಾರಿಗಳು ಕಾನೂನುಬಾಹಿರವಾಗಿ ನಡೆಯುತ್ತಿದ್ದ ಮಾಂಸದಂಗಡಿಗಳ ಬಾಗಿಲು ಮುಚ್ಚಿಸುತ್ತಿದ್ದಾರೆ. ಇದ್ರಿಂದ ನಿರುದ್ಯೋಗಿಗಳಾಗಿರುವ ಮಾಂಸದಂಗಡಿ ಉದ್ಯೋಗಿಗಳು ಹೊಟ್ಟೆಪಾಡಿಗಾಗಿ ಬೇರೆ ಮಾರ್ಗ ಅನುಸರಿಸುತ್ತಿದ್ದಾರೆ.

ಮುಜಾಫರ್ ನಗರದಲ್ಲಿ ಮಾಂಸದಂಗಡಿ ನಡೆಸುತ್ತಿದ್ದ ಅನೇಕ ಮಂದಿ ತಮ್ಮ ಉದ್ಯೋಗ ಬದಲಿಸಿದ್ದಾರೆ. ಮಾಂಸ ಮಾರಾಟದ ಬದಲು ಟೀ ಮಾರಾಟ ಶುರುಮಾಡಿದ್ದಾರೆ. ಮತ್ತೆ ಕೆಲವರು ಚಿಲ್ಲರೆ ಅಂಗಡಿ ತೆರೆದಿದ್ದಾರೆ. ಅಂಗಡಿ ಮುಚ್ಚಿದ ಮೇಲೆ ಹಾಗೆ ಕುಳಿತುಕೊಂಡ್ರೆ ಬೀದಿಗೆ ಬೀಳೋದು ಗ್ಯಾರಂಟಿ. ಹಾಗಾಗಿ ಬೇರೆ ಉದ್ಯೋಗ ಹುಡುಕಿಕೊಂಡಿದ್ದೇವೆ ಎನ್ನುತ್ತಾರೆ ವ್ಯಾಪಾರಸ್ಥರು.

ಹೊಸದಾಗಿ ವ್ಯಾಪಾರ ಶುರುಮಾಡಿರುವ ಟೀ ಹಾಗೂ ಚಿಲ್ಲರೆ ಅಂಗಡಿ ಮಾಲೀಕರು ಭದ್ರತೆಗಾಗಿ ಲೈಸೆನ್ಸ್ ಮಾಡಿಸಿಕೊಂಡಿದ್ದಾರೆ. ಹೊಟ್ಟೆಪಾಡಿಗೆ ಇದು ಅನಿವಾರ್ಯ ಎನ್ನುತ್ತಿದ್ದಾರೆ ವ್ಯಾಪಾರಸ್ಥರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...